ಬೆಂಗಳೂರು ಗ್ರಾಮಾಂತರ: ಮೂರು ಎನ್.ಡಿ.ಪಿ.ಎಸ್ ಪ್ರಕರಣ ದಾಖಲು

ಬೆಂಗಳೂರು ಗ್ರಾಮಾಂತರ ಜನವರಿ,22,2026 (www.justkannada.in): ಮಾದಕವಸ್ತು ಕಳ್ಳಸಾಗಣೆ ವಿರುದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ಅಬಕಾರಿ ಇಲಾಖೆ ವತಿಯಿಂದ ವಿವಿಧ ಕಡೆಗಳಲ್ಲಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ನಡೆಸಿ ಒಟ್ಟು 03 ಎನ್.ಡಿ.ಪಿ.ಎಸ್ ಪ್ರಕರಣಗಳನ್ನು ದಾಖಲಿಸಲಾಗಿದೆ.

3 ಪ್ರಕರಣಗಳಲ್ಲಿ ಒಟ್ಟು 11.357 ಕೆ.ಜಿ ಪ್ರಮಾಣದ ಗಾಂಜಾವನ್ನು ಇಲಾಖಾ ವಶಕ್ಕೆ ಪಡೆಯಲಾಗಿದ್ದು, ಇದರಲ್ಲಿ ಹೊಸಕೋಟೆ ವಲಯದ ಅಬಕಾರಿ ಉಪ ನಿರೀಕ್ಷಕರು ದೊಡ್ಡದುನ್ನಸಂದ್ರದಿಂದ ಅನುಗೊಂಡನಹಳ್ಳಿ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ಸುಹೇಲ್ ಅಹಮ್ಮದ್ ಬಿನ್ ಹುಸೇಲ್ ಅಹಮ್ಮದ್ ಎಂಬ ವ್ಯಕ್ತಿ 0.929 ಕೆ.ಜಿ. ಗಾಂಜಾವನ್ನು ಸಾಗಿಸುತ್ತಿದ್ದಾಗ ಆರೋಪಿಯನ್ನು ಹಿಡಿದು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ದೊಡ್ಡಬಳ್ಳಾಪುರ ವಲಯದ ಅಬಕಾರಿ ವಲಯದ ನಿರೀಕ್ಷಕರು, ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ  ಫ್ಲಾಟ್ ಫಾರಂ ನಂ-04, ಪೋಲ್ ನಂ.ಡಿಬಿಯು-1032 ರ ಬಳಿ 4.14 ಕೆ.ಜಿ ರಷ್ಟು ಗಾಂಜಾವನ್ನು ಸಾಗಾಣಿಕೆ ಮಾಡುವ ಸಮಯದಲ್ಲಿ ಜಪ್ತು ಪಡಿಸಿದ್ದು ಆರೋಪಿ ಪರಾರಿಯಾಗಿರುತ್ತಾನೆ, ತನಿಖೆ ಪ್ರಗತಿಯಲ್ಲಿದೆ.

ಉಳಿದಂತೆ ಹೊಸಕೋಟೆ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕರು, ದೇವನಹಳ್ಳಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ ನಂ-01 ರಲ್ಲಿ 6.288 ಕೆ.ಜಿ ರಷ್ಟು ಗಾಂಜಾವನ್ನು ಚೀಲದಲ್ಲಿ ಸಾಗಾಣಿಕೆ ಮಾಡುವ ಸಮಯದಲ್ಲಿ ಹಿಡಿದಿರುತ್ತಾರೆ. ಆರೋಪಿ ಪರಾರಿಯಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Bangalore Rural,  03 NDPS cases, registered