ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಪದವಿ ಪ್ರವೇಶಾತಿ ಅಭಿಯಾನ

ಮೈಸೂರು, ಜನವರಿ 21,2026 (www.justkannada.in): 2026 27ನೇ ಶೈಕ್ಷಣಿಕ ಸಾಲಿಗೆ ಪದವಿ ಪ್ರವೇಶಾತಿ ಹೆಚ್ಚಳ ಮಾಡುವ ಸಲುವಾಗಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಪ್ರವೇಶಾತಿ ಅಭಿಯಾನದ ಅಂಗವಾಗಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಇಂದು ಪ್ರವೇಶಾತಿ ಅಭಿಯಾನ ಆರಂಭಿಸಿತು.

ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ನಗರದ ವಿವಿಧ ಪದವಿ ಪೂರ್ವ  ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪ್ರವೇಶ ಮಾಹಿತಿ ನೀಡಿದರು. ಮಹಾರಾಣಿ ಪದವಿ ಪೂರ್ವ ಕಾಲೇಜು, ಚಾಮರಾಜ ಜೋಡಿ ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜು, ಡಿ ದೇವರಾಜ ಅರಸು ಪದವಿ ಪೂರ್ವ ಕಾಲೇಜು ಮತ್ತು ಪೀಪಲ್ಸ್ ಸ್ಪಾರ್ಕ್ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿದ ಪ್ರವೇಶಾತಿ ಸಮಿತಿಯ ಸದಸ್ಯರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು ಮತ್ತು ಲಭ್ಯವಿರುವ ಕೋರ್ಸುಗಳು ಹಾಗೂ ಸರ್ಕಾರದಿಂದ ದೊರೆಯುವ ವಿದ್ಯಾರ್ಥಿ ವೇತನ, ವಿದ್ಯಾರ್ಥಿನಿಲಯ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು. ಬಿಎಸ್ಸಿ ಯಲ್ಲಿ 27 ಐಚ್ಚಿಕ ವಿಷಯಗಳು  ಮತ್ತು ಬಿಸಿಎ ಕಾಂಬಿನೇಷನ್ ಗಳ ಬಗ್ಗೆ ಹೇಳಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು  ಪ್ರವೇಶಾತಿ ಸಮಿತಿಯ ಅಧ್ಯಕ್ಷ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ರಹಿಮಾನ್ ಎಂ, ಸಂಚಾಲಕ ಡಾ. ಕೆ ಎಲ್ ರಮೇಶ, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಸುಧಾ ಎಂಸಿ, ಡಾ. ಲೀಲಾವತಿ ಎನ್ಕೆ, ಡಾ. ಎಚ್‌.  ಜೆ. ಭೀಮೇಶ್, ಗೋವಿಂದರಾಜು, ಡಾ.  ರಾಮಚಂದ್ರ, ಡಾ. ಚೇತನ್ ಮಲಗಾವಿ, ಚೇತನ್ ಹಂಜಿ, ಡಾ.ವಾಸುದೇವ ಶೆಟ್ಟಿ ರಶ್ಮಿ ಪಿ ಇ, ಡಾ.ಪ್ರೀತಿ ಎಮ್  ತಲ್ಲೂರ, ಡಾ. ಲತಾ ಕೆ, ಡಾ. ಅನಿಲ್ ಕುಮಾರ್ ಆರ್‌.ಸಿ, ನಟರಾಜು ಬಿಟಿ, ರಮ್ಯಾ ಇತರರು ಇದ್ದರು.

Key words:  admission campaign, Mysore, Maharani Women’s Science College