ನಾಳೆಯಿಂದ ವಿಧಾನಮಂಡಲ ಜಂಟಿ ಅಧಿವೇಶನ: ಭಾಷಣ ಮಾಡಲು ರಾಜ್ಯಪಾಲರು ನಿರಾಕರಣೆ

ಬೆಂಗಳೂರು,ಜನವರಿ,21,2026 (www.justkannada.in): ನಾಳೆಯಿಂದ ವಿಧಾನ ಮಂಡಲ ಜಂಟಿ ವಿಶೇಷ ಅಧಿವೇಶನ ನಡೆಯಲಿದ್ದು ಆದರೆ ರಾಜ್ಯಪಾಲ ಥಾವರ್ ಚಂದ್ ಭಾಷಣ ಮಾಡಲು ನಿರಾಕರಿಸಿದ್ದಾರೆ.

ಹೌದು,  ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿರುವ ಕುರಿತು ನಾಳೆಯಿಂದ ಜ.31ರವರೆಗೆ ರಾಜ್ಯ ಸರ್ಕಾರ ವಿಧಾನ ಮಂಡಲ ಜಂಟಿ ವಿಶೇಷ ಅಧಿವೇಶನಕ್ಕೆ ಮುಂದಾಗಿತ್ತು. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ನಿರಾಕರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾನೂನು ಸಚಿವರ ನೇತೃತ್ವದ ನಿಯೋಗದಿಂದ ಸಂಜೆ 5.45ಕ್ಕೆ ಲೋಕಭವನಕ್ಕೆ ಭೇಟಿ ನೀಡಲಿದೆ ಎನ್ನಲಾಗಿದೆ.

Key words: Joint session, Legislative Assembly, Governor, refuses