ದಾವಣಗೆರೆ,ಜನವರಿ,21,2026 (www.justkannada.in): ತಾಳ್ಮೆಗೂ ಒಂದು ಮಿತಿ ಇದೆ ಎಂಬುದು ಸತ್ಯ. ಅಧಿಕಾರ ಹಂಚಿಕೆ ಬಗ್ಗೆ ಇಬ್ಬರ ನಡುವೆ ಒಪ್ಪಂದ ಆಗಿದೆಯಾ? ಇಲ್ವಾ? ಈ ಬಗ್ಗೆ ವರಿಷ್ಠರು ಆದಷ್ಟು ಬೇಗ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಶಿವಗಂಗಾ, ಇದೇ ಅವಧಿಯಲ್ಲಿ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರಾ? ಮುಂದಿನ ಅವಧಿಗೆ ಬಿಟ್ಟುಕೊಡುತ್ತಾರಾ ಎಂಬದು ಸ್ಪಷ್ಟವಾಗಿಲ್ಲ. ತಾಳ್ಮೆಗೂ ಒಂದು ಮಿತಿ ಇದೆ ಎಂದು ಹೇಳಲಾಗಿದೆ. ಪದೇ ಪದೇ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಆಗುತ್ತಲೇ ಇದೆ. ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಪ್ರಕಟ ಮಾಡಿದರೆ ಒಳ್ಳೇಯದು ಈಗ ಓರ್ವ ಗ್ರಾಂಪಂ ಅದ್ಯಕ್ಷ ಸ್ಥಾನ ಬಿಟ್ಟುಕೊಡುವುದು ಕಷ್ಟ . ಹೀಗಾಗಿ ಹೈಕಮಾಂಡ್ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಬೀದಿ ದಾಸಯ್ಯನಿಗೂ ಸಿಎಂ ಸ್ಥಾ ನೀಡಿದ್ರೆ ಓಕೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ. ಜಮೀರ್ ಹೇಳಿಕೆ ಸರಿಯಲ್ಲ. ಸಿಎಂ ಸ್ಥಾನಕ್ಕೆ ಒಂದು ರೀತಿಯಲ್ಲಿ ಅಗೌರವ ಸೂಚಿಸಿದಂತೆ ಎಂದು ಬಸವರಾಜ ಶಿವಗಂಗಾ ಅಸಮಾಧಾನ ವ್ಯಕ್ತಪಡಿಸಿದರು.
Key words: power sharing, agreement, High command, Congress MLA







