ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ- MLC ರಾಜೇಂದ್ರ ರಾಜಣ್ಣ

ಮೈಸೂರು,ಜನವರಿ,21,2026 (www.justkannada.in):  ನನ್ನ ಪ್ರಕಾರ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ರಾಜೇಂದ್ರ ರಾಜಣ್ಣ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕೆಂಬುದು ನಮ್ಮ ಆಸೆಯಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಬಜೆಟ್ ತಯಾರಿ ಆರಂಭಿಸಿದ್ದಾರೆ. ಹೈಕಮಾಂಡ್ ಮಾತಿಗೆ ನಾನು ಬದ್ದ ಅಂತಾ ಕೂಡ ಸಿಎಂ ಹೇಳಿದ್ದಾರೆ ನನ್ನ ಪ್ರಕಾರ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂದರು.

ಡಿಕೆ ಶಿವಕುಮಾರ್ ಸಿಎಂ ಆಗಲು ಯಾರದ್ದು ಕೂಡ ವಿರೋಧ ಇಲ್ಲ ಹೈಕಮಾಂಡ್ ನಾಯಕರು ತೀರ್ಮಾನ ಮಾಡಬೇಕು ತಾನೇ?  ನನ್ನ ತಂದೆ ರಾಜಣ್ಣ ಡಿಕೆ ಶಿವಕುಮಾರ್ ನಡುವೆ ಜಗಳವೇನು ಇಲ್ಲ ಅವರಿಬ್ಬರು ಹಳೇ ಸ್ನೇಹಿತರು.  ರಾಜಕೀಯವಾಗಿ ನಿಲುವು ಬೇರೆ ಅಷ್ಟೆ.  ರಾಜಣ್ಣ ಡಿಕೆ ಶಿವಕುಮಾರ್ ಇಬ್ಬರು ಚೆನ್ನಾಗಿದ್ದಾರೆ ಎಂದು  ರಾಜೇಂದ್ರ ರಾಜಣ್ಣ ಸ್ಪಷ್ಟಪಡಿಸಿದರು.

Key words: Siddaramaiah, CM, five years, MLC, Rajendra Rajanna