ಮಲೆ ಮಹದೇಶ್ವರ ಬೆಟ್ಟಕ್ಕೆ  ಪಾದಯಾತ್ರೆ ಹೊರಟಿದ್ದ ವ್ಯಕ್ತಿ ಚಿರತೆ ದಾಳಿಗೆ ಬಲಿ..?

ಚಾಮರಾಜನಗರ,ಜನವರಿ,21,2026 (www.justkannada.in): ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಯಾತ್ರಿಕ ಚಿರತೆ ದಾಳಿಗೆ ಬಲಿಯಾಗಿರುವ ಶಂಕೆ  ವ್ಯಕ್ತವಾಗಿದೆ.

ಪ್ರವೀಣ್ ಎಂಬ ಯಾತ್ರಿಕ ಚಿರತೆ ದಾಳಿಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಂಡ್ಯದ ಚೀರನಹಳ್ಳಿಯಿಂದ 5 ಮಂದಿ ತಡರಾತ್ರಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದರು. ಈ ವೇಳೆ ಪ್ರವೀಣ್ ಎನ್ನುವ ಯಾತ್ರಿಕ ಚಿರತೆ ದಾಳಿಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುವ ಸಂದರ್ಭದಲ್ಲಿ ರಸ್ತೆಯ ತಡೆಗೋಡೆ ಮೇಲೆ ಚಿರತೆ ಪ್ರತ್ಯಕ್ಷವಾಗಿದೆ. ಗಾಬರಿಯಿಂದ ಓಡಿ ಹೋಗುವಾಗ ಪ್ರವೀಣ್ ನಾಪತ್ತೆಯಾಗಿದ್ದಾರೆ. ಈ ವೇಳೆ ತಡೆಗೋಡೆಗೆ ಬಿದ್ರಾ? ಅಥವಾ ಪ್ರವೀಣ್  ಚಿರತೆ  ದಾಳಿಗೆ ಬಲಿಯಾದ್ರಾ ಎಂಬ ಅನುಮಾನ ಮೂಡಿದ್ದು ಈವರೆಗೂ ಪ್ರವೀಣ್ ಪತ್ತೆಯಾಗಿಲ್ಲ.

Key words: Male Mahadeshwara hill, death, men, leopard, attack