ಮೈಸೂರು,ಜನವರಿ,20,2026 (www.justkannada.in): ನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಜನವರಿ 21 ರಿಂದ 28 ರವರೆಗೆ ಡಿಜಿಟಲ್ ಇ- ಸ್ಟ್ಯಾಂಪ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ತರಬೇತಿಯಲ್ಲಿ ದಸ್ತಾವೇಜು ಬರಹಗಾರರು, ವಕೀಲರು, e-Stamp ಮಾರಾಟಗಾರರು, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಸಿಬ್ಬಂದಿಯವರು, SHCIL ರವರಿಂದ ನೇಮಕಕೊಂಡಿರುವ Authorized Collection Centre (ACC) e Digital e-stamp ವ್ಯವಸ್ಥೆಯಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ಸಾರ್ವಜನಿಕರು ಆಯಾ ಉಪ ನೋಂದಣಿ ಕಚೇರಿಗಳಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳುವುದು.
ತರಬೇತಿಯು ಜನವರಿ21ರಂದು 12.30ಕ್ಕೆ ಬೆಟ್ಟದಪುರ ಉಪನೋಂದಣಿ ಕಚೇರಿ, ಜ.21 ರಂದು 4 ಗಂಟೆಗೆ ಪಿರಿಯಾಪಟ್ಟಣ ಉಪ ನೋಂದಣಿ ಕಚೇರಿ, ಜ.21.ರಂದು 12.30 ಕ್ಕೆ ಮಿರ್ಲೆ ಉಪ ನೋಂದಣಿ ಕಚೇರಿ, ಜ.21ರಂದು 4.00 ಗಂಟೆಗೆ ಕೆ.ಆರ್. ನಗರ ಉಪ ನೋಂದಣಿ ಕಚೇರಿಯಲ್ಲಿ ನಡೆಯಲಿದೆ.
ಜ.22.ರಂದು 12:30 ಕ್ಕೆ ಬನ್ನೂರು ಉಪ ನೋಂದಣಿ ಕಚೇರಿ, ಜ.22.ರಂದು 4.ಗಂಟೆಗೆ ಟಿ. ನರಸೀಪುರ ಉಪ ನೋಂದಣಿ ಕಚೇರಿ, ಜ.22.ರಂದು 12.30 ಕ್ಕೆ ಹುಣಸೂರು ಉಪ ನೋಂದಣಿ ಕಚೇರಿ, ಜ.22 ರಂದು 4.00 ಗಂಟೆಗೆ ಹೆಚ್.ಡಿ. ಕೋಟೆ,ಉಪ ನೋಂದಣಿ ಕಚೇರಿ, ಜ.22 ರಂದು 4.00 ಗಂಟೆಗೆ ನಂಜನಗೂಡು ಉಪ ನೋಂದಣಿ ಕಚೇರಿಯಲ್ಲಿ ತರಬೇತಿ ನಡೆಯಲಿದೆ.
ಜ.23.ರಂದು 2.30 ಕ್ಕೆ ಮೈಸೂರು (ಪೂರ್ವ), ಉಪ ನೋಂದಣಿ ಕಚೇರಿ, ಜ.23.ರಂದು 4 ಗಂಟೆಗೆ ಮೈಸೂರು (ಪಶ್ಚಿಮ) ಉಪ ನೋಂದಣಿ ಕಚೇರಿ, ಜ.23.ರಂದು 4 ಗಂಟೆಗೆ ಮೈಸೂರು(ಉತ್ತರ), ಉಪ ನೋಂದಣಿ ಕಚೇರಿಯಲ್ಲಿ ತರಬೇತಿ ನಡೆಯಲಿದೆ.
ಜ.28.ರಂದು 12.30 ಕ್ಕೆ ಮುಡಾ ಹೆಚ್ಚುವರಿ ಜಿ.ನೋ.ಕಚೇರಿ ಮೈಸೂರು, ಜ.28.ರಂದು 4 ಗಂಟೆಗೆ ಮೈಸೂರು (ದಕ್ಷಿಣ), ಉಪ ನೋಂದಣಿ ಕಚೇರಿಯಲ್ಲಿ ತರಬೇತಿ ನಡೆಯಲಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Digital e-stamp, training, Jan. 21, Mysore







