ನವದೆಹಲಿ,ಜನವರಿ,20,2026 (www.justkannada.in): ರಾಹುಲ್ ಗಾಂಧಿ ಮೆಚ್ಚಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ವಿ ಸದಾನಂದಗೌಡ, ಈವರೆಗೂ ನಡೆದ ಚನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು. ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನ ಹೇಗೆ ಗೆದ್ದರು. ಬ್ಯಾಲೆಟ್ ಪೇಪರ್ ಬಳಕಯಿಂದ ಗೊಂದಲವಾಗುತ್ತೆ. ರಾಹುಲ್ ಗಾಂಧಿ ಮೆಚ್ಚಿಸುವುದಕ್ಕೆ ಹೀಗೆ ಮಾಡುತ್ತಿದ್ದಾರೆ. ಚುನವಣೆಗೆ ನಾವು ಸಿದ್ದವಿದ್ದೇವೆ. ಕಳೆದ ಚನಾವಣೆಯಲ್ಲಿ ಆದ ಲೋಪ ಸರಿಪಡಿಸಿಕೊಂಡಿದ್ದೇವೆ ಎಂದರು.
ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿ.ವಿ ಸದಾನಂದಗೌಡ, ರಾಜ್ಯ ಗೃಹ ಇಲಾಖೆಯ ವಿಕ್ನೇಸ್ ಬಹಿರಂಗವಾಗಿದೆ. ದೊಡ್ಡ ಅಧಿಕಾರಿ ಕಚೇರಿಯಲ್ಲೇ ಘಟನೆ ನಡೆದಿದೆ. ಗೃಹ ಇಲಾಖೆ ಇಂಟೆಲಿಜೆನ್ಸ್ ಏನು ಮಾಡುತ್ತಿದೆ. ಕಚೇರಿಯಲ್ಲೇ ನಡೆದಿದ್ರೂ ಗೊತ್ತಾಗಿಲ್ವಾ ಎಂದು ಕಿಡಿಕಾರಿದರು.
Key words: Ballot papers, GBA elections, congress, D.V. Sadananda Gowda







