ಬೆಂಗಳೂರು,ಜನವರಿ,20,2026 (www.justkannada.in): ಸಿಎಂ ಸ್ಥಾನ ಅಷ್ಟು ಸುಲಭವಾಗಿ ಸಿಗುವ ಹುದ್ದೆ ಅಲ್ಲ. ಡಿಕೆ ಶಿವಕುಮಾರ್ ಮೊದಲಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಹಣೆಬರಹದಲ್ಲಿದ್ದರೇ ನಮ್ಮಣ್ಣ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಇಂದು ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಂಸದ ಡಿಕೆ ಸುರೇಶ್, ಸಿಎಂ ಸ್ಥಾನ ಅಷ್ಟು ಸುಲಭವಾಗಿ ಸಿಗುವ ಹುದ್ದೆ ಅಲ್ಲ. ಅಧಿಕಾರ ಅಷ್ಟು ಸುಲಭವಾಗಿ ಸಿಗುವ ವಸ್ತು ಅಲ್ಲ ಪಕ್ಷದ ಆದೇಶಕ್ಕೋಸ್ಕರ ಡಿಕೆ ಶಿವಕುಮಾರ್ ಕಾಯುತ್ತಿದ್ದಾರೆ. ಡಿಕೆ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಶಾಸಕರ ಹಿತದೃಷ್ಟಿಯಿಂದ ಎಲ್ಲವನ್ನೂ ತಾಳ್ಮೆಯಿಂದ ಕಾಯುತ್ತಿದ್ದಾರೆ. ನಮ್ಮ ಗುರಿ ಇರುವುದು 2028ರ ಚುನಾವಣೆ ಎಂದರು.
ನಮ್ಮ ಅಣ್ಣನ ಹಣೆಬರೆಹದಲ್ಲಿ ಬರೆದಿದ್ದರೆ ಸಿಎಂ ಆಗ್ತಾರೆ. ಪಕ್ಷ ತಾಳ್ಮಿಯಿಂದಿರಿ ಎಂದು ಹೇಳಿದೆ. ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಕೈ ನಾಯಕ ರಾಹುಲ್ ಗಾಂಧಿ ಮೈಸೂರಿಗೆ ಬಂದಿದ್ದಾಗ ಹೇಳಿದ್ದಾರೆ. ಪಕ್ಷ ಹಾಗೂ ಶಾಸಕರು ಹಿತದೃಷ್ಠಿಯಿಂದ ಕಾಯುತ್ತಿದ್ದೇವೆ ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರುವುದಿಲ್ಲ. ಕುರ್ಚಿಯನ್ನು ಯಾರೂ ಅಷ್ಟೊಂದು ಸುಲಭವಾಗಿ ಬಿಡಲ್ಲ.ಗ್ರಾಪಂ ಅಧ್ಯಕ್ಷರೇ ಕುರ್ಚಿಯನ್ನ ಸುಲಭವಾಗಿ ಬಿಡಲ್ಲ ಎಂದು ನುಡಿದರು.
ಜನವರಿ ಅಂತ್ಯದ ವೇಳೆಗೆ ಬುಲಾವ್ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಸುರೇಶ್, ಅಧಿವೇಶನ ನಡೆಯುವ ವೇಳೆ ಹೇಗೆ ಬುಲಾವ್ ಬರುತ್ತೆ. ರಾಜಕಾರಣಿಗಳಿಗೆ ಊಟ ನಿದ್ದೆ ನೆಮ್ಮದಿ ಇರಲ್ಲ. ಅಧಿಕಾರ ಶಾಶ್ವತ ತಾಳ್ಮೆಯೂ ಶಾಶ್ವತ ಅಲ್ಲ. ಯಾವುದೂ ಶಾಶ್ವತ ಅಲ್ಲ ಎಂದು ಡಿಕೆ ಸುರೇಶ್ ಹೇಳಿದರು.
Key words: DCM, DK Shivakumar, CM, Position, DK Suresh







