ರಾಮನಗರ,ಜನವರಿ,19,2026 (www.justkannada.in): ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಲೇವಡಿ ಮಾಡಿದ್ದಾರೆ.
ಈ ಕುರಿತು ರಾಮನಗರದ ಅಜ್ಜನಹಳ್ಳಿಯಲ್ಲಿ ಮಾತನಾಡಿದ ಶಾಸಕ ಹೆಚ್.ಸಿ ಬಾಲಕೃಷ್ಣ, ರಾಜ್ಯ ರಾಜಕಾರಣಕ್ಕೆ ಯಾರಬೇಕಾದರೂ ಬರಬಹುದು. ಆದರೆ ಹೆಚ್ ಡಿಕೆ ಬಗ್ಗೆ ವಿಶೇಷ ಏನು? ಎಂದರು ಪ್ರಶ್ನಿಸಿದರು.
ಇಲ್ಲೇ ವಿಪಕ್ಷ ನಾಯಕನಾಗಿ ಹೋರಾಟ ಮಾಡಿದ್ದರೆ ಶಕ್ತಿ ಇರುತ್ತಿತ್ತು. ಮೊದಲಿನಿಂದಲೂ ರಾಮನಗರ ಕರ್ಮಭೂಮಿ ಅಂತಾರೆ ಈಗಿನ ಶಾಸಕರ ಕೊಡುಗೆ ಏನು ಅಂತಾ ಜನ ಚರ್ಚೆ ಮಾಡುತ್ತಾರೆ. ಆದರೆ ರಾಮನಗರಕ್ಕೆ ಕುಮಾರಸ್ವಾಮಿ ಕೊಡುಗೆ ಏನು? ಇಕ್ಬಾಲ್ ಹುಸೇನ್ ಸಾಕಷ್ಟು ಅಭಿವೃದ್ದಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಹೆಚ್ ಡಿಕೆ ಶಾಸಕರಾಗಿದ್ದಾಗ ಅಭಿವೃದ್ದಿ ಮಾಡಬಹುದಿತ್ತು. ಅದನ್ನ ಬಿಟ್ಟು ಮಂಡ್ಯ ಚನ್ನಪಟ್ಟಣಕ್ಕೆ ಹೋಗಿ ಅಂದವರು ಯಾರು ಕರ್ಮಭೂಮಿಯಲ್ಲೇ ಸ್ಪರ್ಧಸಿ ಕರ್ಮ ತೋರಿಸಬಹುದಿತ್ತು. ಹೆಚ್ ಡಿಕೆ ಜನರನ್ನು ಬಫೂನ್ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಾಲಕೃಷ್ಣ ಟಾಂಗ್ ಕೊಟ್ಟರು.
Key words: H.D. Kumaraswamy, buffooned, people, MLA Balakrishna







