ಅಬಕಾರಿ ಇಲಾಖೆಯಲ್ಲಿ ಲಂಚ ಆರೋಪ: ಬಿಜೆಪಿಗೆ ಸವಾಲು ಹಾಕಿದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜನವರಿ,19,2026 (www.justkannada.in): ಅಬಕಾರಿ ಇಲಾಖೆಯಲ್ಲಿ ಲಂಚ, ಹಗರಣ ಆರೋಪ ಮಾಡಿರುವ ಬಿಜೆಪಿಗೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ನೀಡಲಿ. ಬಿಜೆಪಿಯವರು ಅಧೀವೇಶನದಲ್ಲೇ ಮಾತನಾಡಲಿ. ತಮ್ಮ ಆರೋಪಕ್ಕೆ ದಾಖಲೆ ಕೊಡಲಿ. ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಹೇಳಿದರು.

ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ,  ರಾಜೀವ್ ಗೌಡ ಮಾಡಿರೋದು ತಪ್ಪು ಅವರಿಗೆ ಶಿಕ್ಷೆ ಆಗುತ್ತೆ. ಗೃಹ ಸಚಿವರು ಇದನ್ನೇ ಹೇಳಿದ್ದಾರೆ.  ರಾಜೀವ್ ಗೌಡಗೆ ನೋಟಿಸ್ ನೀಡಲಾಗಿದೆ. ನಮ್ಮ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇದೆಯಾ? ಎಂದು ವಾಗ್ದಾಳಿ ನಡೆಸಿದರು.

ಹಿಂದೆ ನಮ್ಮವರ ಬಗ್ಗೆ ಸಿ.ಟಿ ರವಿ ಏನು ಮಾತನಾಡಿದ್ರು. ವಿಪಕ್ಷ ನಾಯಕ ಅಶೋಕ್ ಅವರು ನಾಯಿ ಅಂತ ಕರೆದ್ರು.  ಹೆಚ್ ಡಿಕೆ ದೇವೇಗೌಡರು ಏನು ಮಗ ಅಂತಾ ಕರೆದಿದ್ರು. ಅವರಿಗೆಲ್ಲಾ ನೋಟಿಸ್ ಕೊಡುವ ಕೆಲಸ ಆಗಿಲ್ಲ. ಆದರೆ ರಾಜೀವ್ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words: Bribe, allegations, Excise Department, BJP, Minister, Priyank Kharge