.
ಮೈಸೂರು,ಜ.೧೮,೨೦೨೬: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದಲ್ಲಿ “ ನಿಮ್ಹಾನ್ಸ್ “ ಮಾದರಿ ಆಸ್ಪತ್ರೆ ತಲೆ ಎತ್ತಲಿದೆ. ಸಿದ್ದರಾಮಯ್ಯನವರ ಬಹುದಿನಗಳ ಕನಸು ಸಾಕಾರಗೊಳ್ಳುವ ಸಮಯ ಬಂದಿದೆ. 20 ಎಕರೆ ವ್ಯಾಪ್ತಿ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ.
ಅನಧಿಕೃತವಾಗಿ ಸ್ವಾಧೀನದಲ್ಲಿದ್ದ ರೈತರನ್ನು ತೆರವುಗೊಳಿಸಿದ ತಾಲೂಕು ಆಡಳಿತ, ಸರಕಾರಿ ಜಮೀನನ್ನ ವಶಕ್ಕೆ ಪಡೆದು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿದೆ. ಗುಡಮಾದನಹಳ್ಳಿ ಸರ್ವೆ ನಂ.60 ಮತ್ತು 68 ರಲ್ಲಿ 20 ಎಕರೆ ಜಮೀನು ಆಸ್ಪತ್ರೆಗಾಗಿ ಮೀಸಲಿಡಲಾಗಿತ್ತು. ಸದರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಕೆಲವು ಸ್ಥಳೀಯರು ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡಿದ್ದರು.ಇವರನ್ನ ಎತ್ತಂಗಡಿ ಮಾಡಲು ಜಿಲ್ಲಾಡಳಿತ ಹರಸಾಹಸ ನಡೆಸಿತ್ತು.ಸಾಕಷ್ಟು ವಿರೋಧವನ್ನೂ ಎದುರಿಸಿತ್ತು.

ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಮಹತ್ತರ ಯೋಜನೆ ಸಾಕಾರಗೊಳಿಸಲು ನಿರ್ಧರಿಸಿದ ತಾಲೂಕು ಆಡಳಿತ ಇಂದು ಅನಧಿಕೃತವಾಗಿ ಸ್ವಾಧೀನದಲ್ಲಿದ್ದ ಸ್ಥಳೀಯರಿಗೆ ಶಾಕ್ ಕೊಟ್ಟಿದೆ. ಪೊಲೀಸರ ಸಮೇತ ಹಾಜರಾದ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ರವರು ಸದರಿ ಜಮೀನು ವಶಕ್ಕೆ ಪಡೆಯಲು ಮುಂದಾದಾಗ ಪ್ರತಿಭಟನೆ ಎದುರಿಸಬೇಕಾಯಿತು. ರೈತ ಸಂಘದ ನೆರವಿನಿಂದ ಸ್ವಾಧೀನದಲ್ಲಿದ್ದ ರೈತರು ಭಾರಿ ವಿರೋಧ ವ್ಯಕ್ತಪಡಿಸಿದರು.

ವಿರೋಧ ಲೆಕ್ಕಿಸದ ತಹಸೀಲ್ದಾರ್ ಮಹೇಶ್ ಕುಮಾರ್ ಹಾಗೂ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶೇಖರ್ ಅಕ್ರಮ ತೆರವುಗೊಳಿಸುವಲ್ಲಿ ಯಶಸ್ವಿಯಾದರು. ಆಸ್ಪತ್ರೆ ನಿರ್ಮಾಣದ ಉದ್ದೇಶಿತ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ತೋಟವನ್ನು ಜೆಸಿಬಿ ಮೂಲಕ ತೆರುವುಗೊಳಿಸಲಾಯಿತು.
ಮಹಿಳಾ ಅಧಿಕಾರಿಗೆ ಬೆದರಿಕೆ:
ಈ ಮೊದಲು ಸ್ಥಳ ಪರಿಶೀಲನೆಗೆ ತೆರಳಿದ ಮಹಿಳಾ ಅಧಿಕಾರಿ ಮೇಲೆ ಹಲ್ಲೆ ಯತ್ನ ನಡೆಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದ ಘಟನೆ ನಡೆದಿತ್ತು. ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳಾ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
key words: Mysore, Varuna constituency, assault on female officer, Tahsildar, clears 20 acres of illegal land

SUMMARY:
Mysore Varuna constituency: assault on female officer, Tahsildar clears 20 acres of illegal land
Chief Minister Siddaramaiah’s home district, Gudamadanahalli village, will have a “NIMHANS” model hospital. The time has come for Siddaramaiah’s long-held dream to come true. The hospital will be built on an area of 20 acres.

The taluk administration, which has evicted the farmers who were in unauthorized possession, has taken possession of the government land and handed it over to the concerned department. In Gudamadanahalli survey no. 60 and 68, 20 acres of land was reserved for the hospital. Some locals had been cultivating the land illegally for several years. The district administration had tried hard to evict them. It also faced a lot of opposition.






