ರಾಜಣ್ಣ ಮನೆಯಲ್ಲಿ ರಾಜಕೀಯ ಚರ್ಚಿಸಿಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜನವರಿ,17,2026 (www.justkannada.in):  ನಿನ್ನೆ ಕೆಎನ್ ರಾಜಣ್ಣ ಮನೆಯಲ್ಲಿ ಔತಣಕೂಟದ ವೇಳೆ ನಾವು ರಾಜಕೀಯ ಚರ್ಚೆ ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕ ಕೆಎನ್ ರಾಝಣ್ಣ ಮನೆಯಲ್ಲಿ ಮಾಂಸಹಾರ ಮಾಡಲಾಗಿತ್ತು. ನಾವೆಲ್ಲಾ ಊಟ ಮಾಡಿದ್ದವು. ಆ ವೇಳೆ ರಾಜಕೀಯವಾಗಿ ಏನು ಚರ್ಚೆ ನಡೆಸಿಲ್ಲ. ಕೇವಲ ಊಟದ್ದೇ ಚರ್ಚೆ ಆಗಿದೆ.  ಮತ್ತೆ ಸಂಪುಟಕ್ಕೆ ಕೆ.ಎನ್ ರಾಜಣ್ಣ ಸೇರ್ಪಡೆ ವಿಚಾರ,  ನಾನು ಯಾವತ್ತೂ ರಾಜಣ್ಣಗೆ ಸಿಹಿನೇ ಕೋಡೋದು ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಸಿಎಂ ಹೇಳಿದ ಮೇಲೆ ಆಯ್ತಲ್ಲ ಎಂದರು.

ಡಿಕೆ ಶಿವಕುಮಾರ್ ರಿಂದ ಹೈಕಮಾಂಡ್ ಭೇಟಿ ವಿಚಾರ,  ಮಲ್ಲಿಕಾರ್ಜುನ ಖರ್ಗೆ ಆದೇಶದ ಮೇರೆಗೆ ದೆಹಲಿಗೆ ಹೋಗಿದ್ದಾರೆ. ಡಿಕೆ ಶಿವಕುಮಾರ್ ಗೆ ಅಸ್ಸಾಂ ಚುನಾವಣೆ ಉಸ್ತುವಾರಿ ನೀಡಿದ್ದಾರೆ. ಈ ಹಿಂದೆ ನನಗೂ ಮಹರಾಷ್ಟ್ರ ಕೇರಳ ಉಸ್ತುವಾರಿ ಕೊಟ್ಟಿದ್ದರು.  ಈಗ ಡಿಕೆ ಶಿವಕುಮಾರ್ ಗೆ ಅಸ್ಸಾಂ ಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ. ಈ ಕುರಿತು ಚರ್ಚೆ ಮಾಡೋಕೆ ಹೋಗಿದ್ದಾರೆ. ಅದು ಬಿಟ್ಟು ಬೇರೆ ವಿಷಯ ಗೊತ್ತಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

Key words: KN Rajanna, not, discuss, politics, Home Minister, Parameshwar