ಬೆಂಗಳೂರು,ಜನವರಿ,16,2026 (www.justkannada.in): ಡಿಕೆ ಸಹೋದರರಿಗೆ ಹಣ ಮಾಡುವ, ಲೂಟಿ ಮಾಡುವ ಚಪಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಕೆಲವರಿಗೆ ಜನ ಬೆಂಬಲ ಬೇಕು ಅಂತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಹಣ ಹೊಡೆಯಬೇಕು ಅಂತಾರೆ ಜನ ಬೆಂಬಲ ಯಾವ ರೀತಿ ಪಡೆಯಬೇಕು ಅನ್ನೋದಕ್ಕಿಂತ ರಾಜ್ಯವನ್ನ ಹೇಗೆ ಲೂಟಿ ಮಾಡಬೇಕು ಅನ್ನೋದರಲ್ಲಿ ಅವರು ನಿರತರಾಗಿದ್ದಾರೆ. ಈ ರೀತಿ ಇದ್ದರೆ ಜನ ಬೆಂಬಲ ಕೊಡುತ್ತಾರಾ ಎಂದು ಲೇವಡಿ ಮಾಡಿದರು.
ಬಾಯಿ ಚಪಲಕ್ಕೆ ಮಾತಾಡ್ತಾರೆಂದು ಡಿಕೆ ಸುರೇಶ್ ಹೇಳುತ್ತಾರೆ ನಾನು ಬಾಯಿ ಚಪಲಕ್ಕೆ ಮಾತನಾಡಲ್ಲ. ನಿಮ್ಮ ಹಲವು ಅಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಕೊಡುತ್ತಿದ್ದೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.
Key words: Union Minister, HDK, DK Brothers, money







