ಮಂಡ್ಯ,ಜನವರಿ,16,2026 (www.justkannada.in): ಅಣ್ಣ ಮತ್ತು ಆತನ ಮಕ್ಕಳು ಸೇರಿ ತಮ್ಮನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ತಾಲ್ಲೂಕು ಮಾಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಯೋಗೇಶ್(35) ಹತ್ಯೆಯಾದ ವ್ಯಕ್ತಿ. ಅಣ್ಣ ಲಿಂಗರಾಜು ಮಕ್ಕಳಾದ ಭರತ್, ದರ್ಶನ್ ಎಂಬುವವರೇ ಈ ಕೃತ್ಯವೆಸಗಿದ್ದಾರೆ. ಆಸ್ತಿ ಕಲಹ ಹಿನ್ನೆಲೆ ಈ ಹತ್ಯೆ ನಡೆದಿದೆ ಎನ್ನಲಾಗಿದ್ದು ಕೊಲೆಗೈದ ನಂತರ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇನ್ನೇನು ಕೆಲವೇ ದಿನದಲ್ಲಿ ಮೃತ ಯೋಗೇಶ್ ಹಸೆಮಣೆ ಏರಬೇಕಿತ್ತು. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
Key words: Mandya, brother ,killed







