ಸಂಕ್ರಾಂತಿ ಬದಲಾವಣೆ ಆಗಿದೆ: ಡಿಕೆ ಶಿವಕುಮಾರ್ ಗೆ  2 ವರ್ಷ ಸಿಎಂ ಆಗುವ ವಿಶ್ವಾಸವಿದೆ- ಕಾಂಗ್ರೆಸ್ ಶಾಸಕ

ದಾವಣಗೆರೆ,ಜನವರಿ,16,2026 (www.justkannada.in): ಸೂರ್ಯಪಥ ಬದಲಾಗಿದೆ.  ನಮ್ಮ ಪಥ ಕೂಡ ಬದಲಾವಣೆ ಆಗಿದೆ. ನಮ್ಮ ಹೇಳಿಕೆಯಂತೆ ಸಂಕ್ರಾಂತಿಯಲ್ಲಿ ಬದಲಾವಣೆಯಾಗಿದೆ. ಡಿಕೆ ಶಿವಕುಮಾರ್ ಗೆ  2 ವರ್ಷ ಸಿಎಂ ಆಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಶಿವಗಂಗಾ ಬಸವರಾಜು, ಹೊಸಬರು ಎಂಎಲ್ ಎ ಆಗಲು ಡಿಕೆ ಶಿವಕುಮಾರ್ ಕಾರಣ. ಸಿದ್ದರಾಮಯ್ಯ ಸಿಎಂ ಆಗಿ 7.5 ವರ್ಷ ಅಧಿಕಾರ ಮಾಡಿದ್ದಾರೆ.  ಡಿಕೆ ಶಿವಕುಮಾರ್ ಕೂಡ 2 ವರ್ಷ ಸಿಎಂ ಆಗಲಿ ಎಂಬುದು ನಮ್ಮ ಆಶಯ. ಡಿಕೆಗೆ ಸಿಎಂ ಆಗಬೇಕೆಂಬ ಅಭಿಪ್ರಾಯ ಇತ್ತು. ಅದರಂತೆ ಆಗುತ್ತಿದೆ.  ಡಿಕೆ ಶಿವಕುಮಾರ್ ಗೆ ಹೈಕಮಾಮಡ್ ಕರೆ ಕೊಟ್ಟಿದೆ ಇದು ಉತ್ತಮ ಬೆಳವಣಿಗೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದೆ ಸಕ್ಸಸ್ ಆಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ 5 ವರ್ಷ ಸಿಎಂ ಎಂಬ ಬೆಂಬಲಿಗರ ಹೇಳಿಕೆ ವಿಚಾರ,   ಆ ಬಗ್ಗೆ ಹೈಕಮಾಂಡ ತೀರ್ಮಾನ ಮಾಡುತ್ತೆ . ನಾಣನು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳುತ್ತಿದ್ದೆ. ಡಿಕೆ ಶಿವಕುಮಾರ್ ಸಿಎಂ ಆದರೆ ಸಂಪುಟದಲ್ಲಿ ಬದಲಾವಣೆಯಾಗುತ್ತದೆ.  ಸಂಪುಟದಲ್ಲಿ ಹೊಸಬರಿಗೆ ಅವಕಾಶ ಸಿಗುತ್ತದೆ. ನನಗೆ ಸಚಿವಸ್ಥಾನ ಅಂತಾ ಅಲ್ಲ ಯಾವುದೇ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ ಎಂದು ಶಿವಗಂಗಾ ಬಸವರಾಜ್ ಹೇಳಿದ್ದಾರೆ.

Key words: Sankranti, DK Shivakumar, becoming, CM, Congress MLA