ಬೆಂಗಳೂರು,ಜನವರಿ,14,2026 (www.justkannada.in): ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದ ತನಿಖೆ ಹಳ್ಳ ಹಿಡಿದಿದೆ ಎಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾವು ವಿಪಕ್ಷದವರನ್ನು ಕೇಳಿಕೊಂಡು ತನಿಖೆ ಮಾಡುವುದಿಲ್ಲ. ಅದು ಸರಿ ಇಲ್ಲ ಇದು ಸರಿ ಇಲ್ಲವೆಂದು ಹೇಳಲು ಆಗಲ್ಲ. ಯಾರನ್ನು ಬಂಧಿಸಬೇಕೆಂದು ಪೊಲೀಸರು ನಿರ್ಧರಸುತ್ತಾರೆ ನಾವು ಇದರ ಬಗ್ಗೆ ಸೂಚನೆ ಕೊಡಲ್ಲ ಎಂದರು.
ಜರ್ಮನಿ ಫೆಡೆರಲ್ ಚಾನ್ಸಲರ್ ಸ್ವಾಗತಿಸದ ಆರೋಪ ಕುರತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವರು ಬಂದಾಗ ಆ ಬಗ್ಗೆ ಕೇಂದ್ರದವರು ನಮಗೂ ತಿಳಿಸಬೇಕಿತ್ತು. ನಮ್ಮ ರಾಜ್ಯಕ್ಕೆ ಬರುತ್ತಾರೆ ಅಂದ್ರೆ ನಮಗೂ ತಿಳಿಸಬೇಕಿತ್ತು ಆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಯಾರನ್ನೂ ಆಹ್ವಾನಿಸಿಲ್ಲ ಗೌಪ್ಯವಾಗಿ ಬಂದ್ರು ಗೌಪ್ಯವಾಗಿ ಹೋದ್ರು ಅನ್ನೋ ರೀತಿ ಇದೆ. ನಮಗೂ ಜವಾಬ್ದಾರಿ ಇದೆ ಗೌರವ ಕೊಡುತ್ತೇವೆ. ಯಾವುದೇ ಮಾಹಿತಿ ಕೊಡದೇ ಇದ್ದಾಗ ಏನು ಮಾಡಲು ಆಗುತ್ತೆ ಎಂದರು.
Key words: Home Minister, Parameshwar, BJP, allegations







