ಚಿತ್ರದುರ್ಗ,ಜನವರಿ,14,2026 (www.justkannada.in): ಶಿಕಾರಿಪುರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ , ಪಾದಯಾತ್ರೆ ಬೇಡ. ಡಿಸಿಎಂ ಡಿಕೆ ಶಿವಕುಮಾರ್ ಬಂದು ಸ್ಪರ್ಧೆ ಮಾಡಲಿ ಶಿಕಾರಿಪುರಕ್ಕೆ ಬಂದು ಡಿಕೆ ಶಿವಕುಮಾರ್ ಸ್ಪರ್ಧಸಲಿ ಎಂದು ಸವಾಲು ಹಾಕಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಪ್ರಧಾನಿ ಮೋದಿ ಕೈ ಬಲಪಡಿಸಲು ಹೆಚ್ ಡಿಕೆ, ಹೆಚ್ ಡಿ ದೇವೇಗೌಡರು ಎನ್ ಡಿಎ ಸೇರಿದ್ದಾರೆ. ಸ್ಥಳೀಯ ಚುನಾವಣೆ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.
ಸಿಎಂ ಮತ್ತು ಡಿಸಿಎಂ ಜೊತೆ ರಾಹುಲ್ ಗಾಂಧಿ ಗುಪ್ತಚರ್ಚೆ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಇರಲಿ ಅದು ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ. ಒಬ್ಬರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವ ಕಾತುರವಿದೆ ನನ್ನ ತಾಳ್ಮೆ ಕೆಣಕಬೇಡಿ ಎಂದು ಉಳಿದವರು ಸಿದ್ದರಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಜನರ ಹಿಡಿಶಾಪ ಹಾಕುತ್ತಿದ್ದಾರ. ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಲು ಯತ್ನಿಸಿದರೆ ಮತ್ತೊಬ್ಬರು ಕುರ್ಚಿ ಕಸಿಯಲು ಯತ್ನಿಸುತ್ತಿದ್ದಾರೆ. ಇಬ್ಬರೂ ಹೋಗಿ ರಾಹುಲ್ ಬಳಿ ನಿಂತಿದ್ದಾರೆ. ರಾಜ್ಯದ ಪರಿಸ್ಥಿತಿ ಏನಾಗಬೇಕೆಂದು ಜನರು ಗಮನಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು.
Key words: DK Shivakumar, Shikaripura, contest, BY Vijayendra







