ಜ.17ರಂದು ಬೃಹತ್ ಹೋರಾಟ ಮಾತ್ರ, ಪಾದಯಾತ್ರೆ ಇಲ್ಲ- ಬಿ.ವೈ. ವಿಜಯೇಂದ್ರ

ಬೆಂಗಳೂರು,ಜನವರಿ,13,2026 (www.justkannada.in): ಜನವರಿ 17 ರಂದು ಪಾದಯಾತ್ರೆ ಅಲ್ಲ. ಬೃಹತ್ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಪಾದಯಾತ್ರೆಗೆ ಶ್ರೀರಾಮುಲು ಜನಾರ್ದನರೆಡ್ಡಿ ಸ್ಥಳೀಯ ನಾಯಕರ ಆಕ್ಷೇಪವಿದೆ.  ಪಾದಯಾತ್ರೆ ಬಗ್ಗೆ ನಾನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ.  ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಪಾದಯಾತ್ರೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನವಾಗಲಿದೆ ಎಂದರು.

ಬಳ್ಳಾರಿ ಪಾದಯಾತ್ರೆ ಮಾಡಲ್ಲ, ಬೃಹತ್ ಹೋರಾಟ ಮಾತ್ರ ನಡೆಸಲಾಗುತ್ತದೆ. ಕಾನೂನು ಸುವ್ಯವಸ್ಥೆ ವಿಚಾರ ಇಟ್ಟುಕೊಂಡು ಹೋರಾಟ ಮಾಡುತ್ತೇವೆ. ಪಾದಯಾತ್ರೆ ನಿರ್ಧಾರವನ್ನು ಹೈಕಮಾಂಡ್ ಗೆ ಬಿಟ್ಟಿದ್ದೇವೆ. ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಮಾತ್ರ ಪಾದಯಾತ್ರೆ ಮಾಡುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

Key words: massive, protest, January 17, BJP, B.Y. Vijayendra