ಮೈಸೂರು: ಸಿಎಂ ಮತ್ತು ಡಿಸಿಎಂ ಜೊತೆ ಪ್ರತ್ಯೇಕ ಚರ್ಚೆ ನಡೆಸಿದ ಕೈ ನಾಯಕ ರಾಹುಲ್ ಗಾಂಧಿ

ಮೈಸೂರು,ಜನವರಿ,13,2026 (www.justkannada.in): ತಮಿಳುನಾಡು ಕಾರ್ಯಕ್ರಮವನ್ನು ಮುಗಿಸಿ ದೆಹಲಿಗೆ ತೆರಳಲು ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಕೆಲಕಾಲ ಚರ್ಚಿಸಿದರು.

ತಮಿಳುನಾಡಿನ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಮಧ್ಯಾಹ್ನ ವಿಮಾನ ಬದಲಾವಣೆಗೆ ಮೈಸೂರಿನ ಏರ್ ಪೋರ್ಟ್ ಗೆ ಆಗಮಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರನ್ನ ಸ್ವಾಗತಿಸಿದ್ದರು.

ತಮಿಳುನಾಡು ಕೂಡ್ಲೂರು ಕಾರ್ಯಕ್ರಮವನ್ನ ಮುಗಿಸಿ ವಾಪಸ್ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ ಕೆಲ ಕಾಲ ಚರ್ಚಿಸಿದರು. ಮೊದಲು ಸಿಎಂ ಸಿದ್ದರಾಮಯ್ಯರನ್ನ ಸೈಡ್ ಕರೆದುಕೊಂಡು ಹೋಗಿ ಚರ್ಚಿಸಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ರನ್ನೂ ಪ್ರತ್ಯೇಕವಾಗಿ ಸೈಡ್ ಗೆ ಕರೆದೊಯ್ದು ಚರ್ಚಿಸಿದರು.

ನಾಯಕತ್ವ ಬದಲಾವಣೆ ಚರ್ಚೆ ಸುದ್ದಿಯಾಗಿರುವ ವೇಳೆ ಪ್ರತ್ಯೇಕ ಮಾತುಕತೆ ಸಾಕಷ್ಟು ಕುತೂಹಲ ಮೂಡಿಸಿದೆ.

Key words: Mysore, Rahul Gandhi, separate, discussions , CM and DCM