ಬೆಂಗಳೂರು,ಜನವರಿ,13,2026 (www.justkannada.in): ಕೋಗಿಲು ಲೇಔಟ್ ನಲ್ಲಿ ಯಾವುದೇ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಕೋಗಿಲು ಲೇಔಟ್ ನಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೋಗಿಲು ಲೇಔಟ್ ನಲ್ಲಿ ಯಾವುದೇ ಅಕ್ರಮ ಬಾಂಗ್ಲಾ ವಲಸಿಗರು ಇಲ್ಲ. ಮನೆಗಳ ತೆರವು ಸಂಬಂಧ ಎಲ್ಲಾ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ಅಲ್ಲಿರುವವರ ಪಟ್ಟಿ ತರಿಸಿಕೊಂಡು ನೋಡಿದ್ದೇನೆ.
ಅದರಲ್ಲಿ ಯಾವುದೇ ಬಾಂಗ್ಲಾ ನಿವಾಸಿಗಳು ಇಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಈ ಬಗ್ಗೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಪರಮೇಶ್ವರ್ ತಿಳಿಸಿದರು.
Key words: no illegal, Bangladeshi, immigrants, Home Minister ,Parameshwar







