ಜಿಬಿಎ ಚುನಾವಣೆಗೆ ಸಿದ್ದ: ಗುಂಡಿಗಳಲ್ಲಿ ಕಾಂಗ್ರೆಸ್ ಮುಚ್ಚುವ ಕಾಲ ಬಂದಿದೆ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಜನವರಿ,12,2026 (www.justkannada.in): ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರಿನಲ್ಲಿ ಮಳೆ ಬಂದರೆ ಬೋಟ್ ನಲ್ಲಿ ಹೋಗುವ ಪರಿಸ್ಥಿತಿ ಇದೆ. ಗುಂಡಿಗಳಲ್ಲಿ ಕಾಂಗ್ರೆಸ್ ಮುಚ್ಚುವ ಕಾಲ ಬಂದಿದೆ. ಗುಂಡಿಯಲ್ಲೇ ಕಾಂಗ್ರೆಸ್ ಪಕ್ಷವನ್ನು ಜನರು ಮುಚ್ಚುತ್ತಾರೆ ಎಂದು ಲೇವಡಿ ಮಾಡಿದರು.

ಜಿಬಿಎ ಚುನಾವಣೆಗೆ ನಾವು ಯಾವಾಗಲೂ ರೆಡಿ ಇದ್ದೇವೆ. ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

Key words: close ,Congress, potholes, Chalavadi Narayanaswamy