ಜೂನ್ 30ರೊಳಗೆ ‘GBA ಚುನಾವಣೆ’ ಪೂರ್ಣಗೊಳಿಸಿ- ಸುಪ್ರೀಂಕೋರ್ಟ್ ನಿರ್ದೇಶನ

ನವದೆಹಲಿ,ಜನವರಿ,12,2026 (www.justkannada.in): ಜೂನ್ 30ರೊಳಗೆ ಜಿಬಿಎಯ ಐದು ಮಹಾನಗರ ಪಾಲಿಕೆಗಳ ಚುನಾವಣೆ ಪೂರ್ಣಗೊಳಿಸಿ ಎಂದು ಕರ್ನಾಟಕ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿಜೆ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಬಿಜೆಪಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ ಈಗ ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಕೆಎನ್ ಫಣೀಂದ್ರ ಮಾರ್ಚ್ 16ರೊಳಗೆ ಮತದಾರರ ಅಂತಿಮ ಪಟ್ಟಿ  ಬಿಡುಗಡೆ ಮಾಡಲಾಗುತ್ತದೆ. ಮಾರ್ಚ್ ನಿಂದ ಎಸ್ ಎಸ್ ಎಲ್ ಸಿ  ಸೇರಿ ಇತರೆ ಪರೀಕ್ಷೆಗಳು ನಿಗದಿಯಾಗಿವೆ.  ಮೇ 26ರೊಳಗೆ ಜಿಬಿಎ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತೇವೆ. ಫೆಬ್ರವರಿ 20ರೊಳಗೆ ಅಂತಿಮ ಮೀಸಲಾತಿ ಪಟ್ಟಿ ಹೊರಬರಲಿದೆ  ಎಂದು ಮಾಹಿತಿ ನೀಡಿದರು.

Key words: Complete, GBA election, June 30, Supreme Court