ಕೇರಳದಲ್ಲಿ ಚುನಾವಣಾ ಕಾರಣಕ್ಕೆ ಭಾಷಾ ರಾಜಕಾರಣ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಜನವರಿ,10,2026 (www.justkannada.in): ಕೇರಳದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಂ ಕಡ್ಡಾಯ ಮಾಡಲು ಮುಂದಾಗಿರುವ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ, ಕೇರಳದಲ್ಲಿ ಮಲೆಯಾಂ ಕಡ್ಡಾಯ ಮಾಡಿದರೆ ಸಮಸ್ಯೆ ಇಲ್ಲ. ಆದರೆ ಗಡಿಭಾಗದ ಕನ್ನಡ ಶಾಲೆಗಳ ಮೇಲೆ ಮಲೆಯಾಂ ಕಡ್ಡಾಯ ಮಾಡಬಾರದು. ಚುನಾವಣಾ ಕಾರಣಕ್ಕೆ ಕೇರಳ ಸರ್ಕಾರ ಭಾಷಾ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.  ಅಕ್ರಮವಲಸಿ

ಕೋಗಿಲು ಲೇಔಟ್ ಅಕ್ರಮ ಮನೆಗಳ ತೆರವು ಪ್ರಕರಣದಲ್ಲಿ  ಕೇರಳ ಸಿಎಂ ಟ್ವಿಟ್ ಗೆ ಸ್ಪಂದನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಕರ್ನಾಟಕ ಸರ್ಕಾರ ಕೇರಳ ಸರ್ಕಾರಕ್ಕೆ ಹೆದರುತ್ತಿದೆ. ಕೇರಳ ಸರ್ಕಾರದ ಒತ್ತಡಕ್ಕೆ ಮಣಿಯುತ್ತಿದೆ.  ವೇಣುಗೋಪಾಲ್ ಹೇಳಿದ್ದನ್ನ ಕೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: Language politics, election reasons, Kerala, Chalavadi Narayanaswamy