ಸಿಡಿ ಫ್ಯಾಕ್ಟರಿ ಇದ್ದಿದ್ದೇ ಪದ್ಮನಾಭನಗರ, ಹೊಳೆನರಸೀಪುರದಲ್ಲಿ : ಮಾಜಿ ಸಂಸದ ಡಿಕೆ ಸುರೇಶ್ ಟಾಂಗ್

ಬೆಂಗಳೂರು,ಜನವರಿ,10,2026 (www.justkannada.in):  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿರುವ ಮಾಜಿ ಸಂಸದ ಡಿ.ಕೆ ಸುರೇಶ್, ಸಿಡಿ ಫ್ಯಾಕ್ಟರಿ ಇದ್ದಿದ್ದೆ ಹೊಳೆನರಸೀಪುರ ಪದ್ಮನಾಭನಗರದಲ್ಲಿ. ಆ ಫ್ಯಾಕ್ಟರಿಯಲ್ಲಿ ಸಿಡಿ ಯಾರು ಮ್ಯಾನುಫ್ಯಾಕ್ಚರ್ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್, ಜೆಡಿಎಸ್ ನವರಿಗೆ ಕೆಲಸ ಇಲ್ಲ. ಇಡೀ ದೇಶದಲ್ಲಿ ಅತ್ಯಂತ ಹೀನಾಯವಾದ ಕೃತ್ಯ ಎಂದರೆ ಅದು ಹಾಸನದಲ್ಲಿ ನಡೆದ ದುರ್ಘಟನೆ. ಅದರ ಬಗ್ಗೆ ಒಂದು ವಿಷಾದ ವ್ಯಕ್ತಪಡಿಸುವುದಕ್ಕೆ ಆಗದೆ ಇರುವ  ಜೆಡಿಎಸ್ ಮುಖಂಡರುಗಳು ಯಾರ್ಯಾರು ಬಿಟ್ ಮಾಡುತ್ತಿದ್ದಾರೆ. ಅವರಿಗೆ ಇದರ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಏನಿದೆ?  ಎಂದು ಪ್ರಶ್ನಿಸಿದರು.

ಎಚ್ ಡಿ ಕುಮಾರಸ್ವಾಮಿ ಅವರೇ ನಿಮ್ಮ ಇಲಾಖೆಯಿಂದ ಏನು ಮಾಡಿದ್ದೀರಿ? ಮೊದಲು ಎಚ್ ಎಂಟಿ ಅವರಿಗೆ ನ್ಯಾಯ ಕೊಡಿಸಿ ಎಂದು ಡಿ.ಕೆ ಸುರೇಶ್ ಗುಡುಗಿದರು.

Key words: CD factory, Padmanabhanagar, Holenarasipur, DK Suresh