ಮೈಸೂರು,ಜನವರಿ,9,2026 (www.justkannada.in): ಮುಂದಿನ ವಿಧಾನಸಭಾ ಚುನಾವಣೆಗೆ ಚಾಮರಾಜ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ, ಡಾ. ಶ್ರೂಶ್ರುತ್ ಗೌಡ ನಡುವೆ ಫೈಟ್ ಇದ್ದು ಇದೀಗ ಬಿಜೆಪಿ ಮುಖಂಡ, ನಾಯಕ ನಟ ಜಯಪ್ರಕಾಶ್ (ಜೆಪಿ) ಸಹ ಕ್ಷೇತ್ರದ ಅಖಾಡಕ್ಕಿಳಿದಿದ್ದಾರೆ. 
ನಾನು ಕೂಡ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಜಯಪ್ರಕಾಶ್ ತಿಳಿಸಿದ್ದಾರೆ. ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಪ್ರಕಾಶ್ , ನಾನು ಸುಮಾರು ವರ್ಷಗಳಿಂದ ಬಿಜೆಪಿಯಲ್ಲಿ ದುಡಿಯುತ್ತಿದ್ದೇನೆ. ಈ ಹಿಂದೆ ದೇವೇಗೌಡರು ಬಿಜೆಪಿಗೆ ಹೋಗಬೇಡ ಅಂದರು. ಆದರೂ ದೇಶದ ಹಿತದೃಷ್ಠಿಯಿಂದ ಬಿಜೆಪಿ ತತ್ವ ಸಿದ್ಧಾಂತಗಳನ್ನು ಇಷ್ಟಪಟ್ಟು ಬಿಜೆಪಿ ಬಂದೆ. ಅನಂತ್ ಕುಮಾರ್, ಚಾಮರಾಜ ಒಡೆಯರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದೆ. ಆವಾಗಲೇ ಚಾಮರಾಜ ಕ್ಷೇತ್ರದ ಟಿಕೆಟ್ ಜಯಪ್ರಕಾಶ್ ಗೆ ಅಂತ ಹೇಳಿದ್ದರು. ದಿಲ್ಲಿಯಲ್ಲಿ ಟಿಕೆಟ್ ಕೂಡ ಘೋಷಣೆ ಆಗಿತ್ತು. ಆದರೆ ಶಂಕರಲಿಂಗೇಗೌಡರಿಗೆ ನಾನು ಟಿಕೆಟ್ ಬಿಟ್ಟು ಕೊಟ್ಟೆ ಎಂದರು.
ಅಂದು ರಾಜ್ಯದಲ್ಲಿ ಬಿಜೆಪಿ ಗಾಳಿ ಇರಲಿಲ್ಲ. ಮೈಸೂರಿನಲ್ಲಿ 3 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಇಂದು ನಮ್ಮ ಪಕ್ಷ ತಾಯಿ ತರ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರನ್ನು ವಿಭಜನೆ ಮಾಡೋದು ಬಿಡಬೇಕು. ಪಕ್ಷ ಟಿಕೆಟ್ ಕೊಟ್ಟಾಗ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸೋದು ಕಾರ್ಯಕರ್ತರು. ನಾನು ಶುದ್ಧ ಹಸ್ತದ ರಾಜಕಾರಣಿ. 2018ರಲ್ಲಿ ನಾಗೇಂದ್ರಗೆ ಪಕ್ಷ ಟಿಕೆಟ್ ಕೊಟ್ಟಿತ್ತು. ಅಂದು ಕೂಡ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಸುಮ್ಮನಾದೆ. 2023ರಲ್ಲಿ ಕೂಡ ಟಿಕೆಟ್ ಸಿಗಲಿಲ್ಲ. ಆದರೆ ಈ ಬಾರಿ ನನಗೆ ಟಿಕೆಟ್ ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಮೊದಲು ಪಕ್ಷ ಕಟ್ಟೋಣ ಕಾರ್ಯಕರ್ತರನ್ನು ವಿಭಜನೆ ಮಾಡೋದು ಬೇಡ ಎಂದು ಜಯಪ್ರಕಾಶ್ ಹೇಳಿದ್ದಾರೆ.
Key words: I am, BJP, ticket aspirant, Chamaraja constituency, Jayaprakash







