IT ಇಲಾಖೆಯವರು ಹೆಚ್ ಡಿಕೆ ಜೇಬಲ್ಲೇ ಇದ್ದಾರಲ್ಲಾ- ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

ಬೆಂಗಳೂರು,ಜನವರಿ,6,2026 (www.justkannada.in): ಬಳ್ಳಾರಿ ಗಲಾಟೆ ವೇಳೆ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್  ವೈಯಕ್ತಿಕವಾಗಿ 25 ಲಕ್ಷ ರೂ ಪರಿಹಾರ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಮೃತ ವ್ಯಕ್ತಿ ಕುಟುಂಬಕ್ಕೆ ಕೊಟ್ಟ ಹಣ ಯಾರದ್ದು ಎಂದು ಪ್ರಶ್ನಿಸಿದ ಹೆಚ್ಡಿಕೆಗೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಐಟಿ ಇಲಾಖೆಯೆಲ್ಲಾ ಹೆಚ್ ಡಿ ಕುಮಾರಸ್ವಾಮಿ ಬಳಿ ಇದೆಯಲ್ಲಾ? ಅವರ ಜೇಬಲ್ಲೇ ಐಟಿ ಇಲಾಖೆಯವರು ಇದ್ದಾರಲ್ವಾ? ಎಂದು ಲೇವಡಿ ಮಾಡಿದರು. ಇನ್ನು ಹಣದ ಬಗ್ಗೆ ಬಗ್ಗೆ ಸಚಿವ ಜಮೀರ್ ಬಳಿ ಮಾತನಾಡುತ್ತೇನೆ ಎಂದರು.

ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್,   ನಮಗೆ ಯಾವುದೇ ಗೊಂದಲವಿಲ್ಲ. ಶುಭ ಹಾರೈಸುತ್ತೀನಿ.  ಸಿಎಂ ಸಿದ್ದರಾಮಯ್ಯಗೆ ಒಳ್ಳೇಯದಾಗಲಿ.  I wish him all the best ಎಂದರು.

Key words: IT, department, under, HDK, DCM, DK Shivakumar