ಬಳ್ಳಾರಿ ಗಲಾಟೆ ಕೇಸ್ : ಸಿಐಡಿ, ನ್ಯಾಯಾಂಗ ತನಿಖೆ ಬಗ್ಗೆ ನಾಳೆ ತೀರ್ಮಾನ-ಸಿಎಂ ಸಿದ್ದರಾಮಯ್ಯ

ಮೈಸೂರು,ಜನವರಿ,5,2026 (www.justkannada.in):  ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣದ ಕುರಿತು ಸಿಐಡಿ, ನ್ಯಾಯಾಂಗ ತನಿಖೆಗೆ ನೀಡುವ ಬಗ್ಗೆ ನಾಳೆ ತೀರ್ಮಾನ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಪೊಲೀಸರ ಕಾರ್ಯದಕ್ಷತೆ ಬಗ್ಗೆ ಅನುಮಾನವಿಲ್ಲ. ವರದಿ ಬಂದ ಮೇಲೆ ಮಾತನಾಡುತ್ತೇನೆ. ನ್ಯಾಯಾಧೀಶರಿಂದ ತನಿಖೆ ಆಗಬೇಕೆಂದು ಬಿಜೆಪಿಯವರು ಒತ್ತಾಯಿಸಿದ್ದಾರೆ. ನಾಳೆ ಪರಮೇಶ್ವರ್ ಜೊತೆ ಮಾತನಾಡುತ್ತೇನೆ. ಬಳಿಕ  ಸಿಐಡಿ, ನ್ಯಾಯಾಂಗ ತನಿಖೆಗೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದರು.

ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಪೋಸ್ಟ್ ಮಾರ್ಟಮ್ ಎರೆಡೆರಡು ಬಾರಿ ಮಾಡಿದ್ದು ಯಾಕೆ? ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಈ ವಿಚಾರ ಗೊತ್ತಿಲ್ಲ. ಇದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ನಮ್ಮ ಪೊಲೀಸರಿಂದ ಸಮರ್ಥವಾಗಿ ತನಿಖೆಯಾಗುತ್ತೆ ಎಂದರು.

Key words: Bellary, riot case, CM, Siddaramaiah, Mysore