ಬೆಂಗಳೂರು,ಜನವರಿ,5,2026 (www.justkannada.in): ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಗಲಾಟೆ ಆಗಿ ಫೈರಿಂಗ್ ನಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಗ್ರೇಟ್ ಡಿಸಿಎಂ ಭರತ್ ರೆಡ್ಡಿ ಬೆನ್ನಿಗೆ ನಿಲ್ಲುತ್ತೀವಿ ಅಂತಾರೆ. ಸಿಎಂ ಸಿದ್ದರಾಮಯ್ಯ ಬಳ್ಳಾರಿ ಘರ್ಷಣೆಗೆ ಕ್ಷುಲ್ಲಕ ಕಾರಣ ಅಂತಾರೆ. ಅಲ್ಲದೆ ಗೃಹ ಸಚಿವ ಪರಮೇಶ್ವರ್ ರವರು ಇದು ಕಾಕತಾಳಿಯ ಎಂದು ಹಿಮ್ಮೆಳ ಬಾರಿಸುತ್ತಾರೆ. ಈ ಸರ್ಟಿಫಿಕೇಟ್ ಕೊಟ್ಟ ಮೇಲೆ ಯಾವ ತನಿಖೆ ನಡೆಸುತ್ತೀರಾ? ಇವರ ತೆವಲಿಗೆ ಅಧಿಕಾರಕ್ಕೆ ಯಾರನ್ನು ಬೇಕಾದರೂ ಬಲಿಕೊಡುತ್ತಾರೆ. ಭದ್ರತೆ ಕೇಳಿದರೆ ಇರಾಕ್, ಅಮೇರಿಕಾದಿಂದ ತರಿಸಿಕೊಳ್ಳಿ ಅಂತಾರೆ ನೀವು ಏನು ದನ ಕಾಯೋಕ್ಕೆ ಇದ್ದೀರಾ ಎಂದು ಹರಿಹಾಯ್ದರು.
ಬ್ಯಾನರ್ ಕಟ್ಟುವ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾಂಗ್ರೆಸ್ ಕಾರ್ಯಕರ್ತನ ಹತ್ತೆಯಾಗಿದೆ ಪ್ರತಿಮೆ ಅನಾವರಣ ಮಾಡುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ವಿಶೇಷ ಪ್ರಕರಣ ಎಂದು ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಜನವರಿ 1 ರದು ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟಿದರಂತೆ. ಮನೆಯ ಬಳಿ ಬ್ಯಾನರ್ ತೆಗೆಯುವಂತೆ ಜನಾರ್ದನ ರೆಡ್ಡಿ ಹೇಳಿದ್ದರು. ಬಳಿಕ ಶಾಸಕರ ಆಪ್ತ ರೆಡ್ಡಿ ಮನೆಯ ಬಳಿ ಹಾಕಿಕೊಂಡು ಕೂರುತ್ತಾರೆ. ಚೇರ್ ಹಾಕಿಕೊಂಡು ಕೂರೋದು ಅವರಿಗೆ ದಬ್ಬಾಳಿಕೆ ಮಾಡುವುದು 10 ಜನ ಇದ್ದಾಗ ಖಾಲಿ ಮಾಡಿಸಲು ಇಲಾಖೆಗೆ ಆಗಲಿಲ್ವಾ? ಪ್ರತಿಮೆ ಅನಾವರಣ ಮಾಡಲು ಸರ್ಕಾರ ಅನುಮತಿ ಕೊಟ್ಟಿತ್ತಾ? ಅನುಮತಿ ಕೊಡದಿದ್ದರೆ ಯಾವ ಅಧಿಕಾರದಲ್ಲಿ ಅನಾವರಣಕ್ಕೆ ಹೋಗಿದ್ದು? ಎಂದು ಹೆಚ್ ಡಿಕೆ ಗುಡುಗಿದ್ದಾರೆ.
Key words: Ballari, roit case, Congress Government, Union Minister, HDK







