ಬೆಂಗಳೂರು,ಜನವರಿ,5,2026 (www.justkannada.in): ಕೋಗಿಲು ಲೇ ಔಟ್ ನಲ್ಲಿ ಅಕ್ರಮ ಮನೆಗಳನ್ನ ತೆರವಿನಿಂದಾಗಿ ನಿರಾಶ್ರಿತರಾದವರಿಗೆ ಮನೆ ಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ, ಕಳೆದ 30 ವರ್ಷಗಳಿಂದ 65 ಲಕ್ಷ ಜನ ನೋಂದಣಿ ಮಾಡಿಸಿದ್ದಾರೆ. ವಸತಿ ರಹಿತ ಎಂದು ನೋಂದಣಿ ಮಾಡಿಸಿದ್ದಾರೆ. ನಿಮಗೆ ಪಾಕಿಸ್ತಾನದವರನ್ನ ಕಂಡರೆ ಪ್ರೀತಿ ಅಂತಾ ನಮಗೆ ಗೊತ್ತು. ನೀವು ಮೊದಲು ರಾಜ್ಯದ ಕನ್ನಡಿಗರಿಗೆ ಮನೆ ಕೊಡಿ ಅಮೇಲೆ ನಿಮ್ಮ ಮಾನವೀಯತೆ ತೋರಿಸಿ ಎಂದು ಕುಟುಕಿದರು.
ಬಾಂಗ್ಲಾದೇಶದವರಿಗೆ ಮನೆ ನೀಡಿ ಅ ಮೇಲೆ ಬಾಂಬ್ ಹಾಕ್ತಾರೆ ಜೆ.ಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಿದ್ದಾರೆ. ಅಯ್ಯಪ್ಪ ಮಾಲೆ ಹಾಕಿದವರ ಮೇಲೆ ಹಲ್ಲೆ ಮಾಡುತ್ತಾರೆ ಅಂಥವರಿಗೆ ಸರ್ಕಾರ ಮನೆಗಳನ್ನ ಕಟ್ಟಕೊಡಲು ಮುಂದಾಗುತ್ತೆ. ರಾಮನ ಹೆಸರಿನವರು ಸಿಎಂ, ಶಿವನ ಹೆಸರಿನವರು ಡಿಸಿಎಂ. ಆದರೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಹಿಂದೂಗಳ ಮೇಲೆ ಪ್ರೀತಿ ಇಲ್ಲ ಪಶ್ಚಿಮ ಬಂಗಾಳ ಗಡಿಯಿಂದ ಬಾಂಗ್ಲಾದವರು ಬರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರ ಕಡೆಗೆ ಬೊಟ್ಟು ಮಾಡುತ್ತಾರೆ ಎಂದು ಕಿಡಿಕಾರಿದರು.
Key words: houses, Kannadigas, first, MLC, CT Ravi







