BCCI ನಿರ್ದೇಶನ ಹಿನ್ನೆಲೆ: ಬಾಂಗ್ಲಾ ಆಟಗಾರನನ್ನು ಕೈಬಿಟ್ಟ KKR

ಮುಂಬೈ,ಜನವರಿ,3,2026 (www.justkannada.in): ಐಪಿಎಲ್ 2026 ರ ಮುಂಬರುವ ಆವೃತ್ತಿಗಾಗಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ (KKR)ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಕೆಕೆಆರ್ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮನ್ ರವರನ್ನು ಕೈಬಿಟ್ಟಿದೆ. ಎರಡು ವಾರದಲ್ಲಿ ಬಾಂಗ್ಲಾದೇಶದಲ್ಲಿ ನಾಲ್ಕು ಹಿಂದೂಗಳ ಹತ್ಯೆಯಾದ ಬಳಿಕ ಹಾಗೂ ಬಾಂಗ್ಲಾದಲ್ಲಿ ಭಾರತ ವಿರೋಧಿ ಭಾವನೆ ತೀವ್ರ ಮತ್ತು ಅಲ್ಲಿನ ಅಲ್ಫಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಡಿಸೆಂಬರ್ 2025 ರಲ್ಲಿ ನಡೆದ ಐಪಿಎಲ್ 2026 ಮಿನಿ ಹರಾಜಿನಲ್ಲಿ ಕೆಕೆಆರ್ ಮುಸ್ತಾಫಿಜುರ್ ಅವರನ್ನು 9.20 ಕೋಟಿ ರೂ.ಗಳಿಗೆ ಸಹಿ ಮಾಡಿಕೊಂಡಿತ್ತು.

Key words: BCCI, KKR, drops, Bangladesh, player