ಗನ್ ಸಂಸ್ಕೃತಿ ಕರ್ನಾಟಕ ರಾಜ್ಯ, ಬಳ್ಳಾರಿಗೆ ಒಳ್ಳೆಯದಲ್ಲ-ಸಚಿವ ಸಂತೋಷ್ ಲಾಡ್

ಬಳ್ಳಾರಿ,ಜನವರಿ,2,2026 (www.justkannada.in): ಬಳ್ಳಾರಿಯಲ್ಲಿ ಬ್ಯಾನರ್ ಹಾಕುವ ವೇಳೆ ಗಲಾಟೆಯಲ್ಲಿ ಫೈರಿಂಗ್ ನಿಂದ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ ಪ್ರಕರಣ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್,  ಘಟನೆ ಬಗ್ಗೆ ಸ್ವಲ್ಪ ಮಾಹಿತಿ ಇದೆ ಎಸ್ ಪಿ ಜೊತೆ ಮಾತಾಡಿದ್ದೇನೆ.  ಗೃಹ ಸಚಿವರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.  ಸಮರ್ಪಕ ತನಿಖೆಯ  ನಂತರ ಎಲ್ಲಾ ಸತ್ಯಾಸತ್ಯತೆ ಗೊತ್ತಾಗಲಿದೆ ಯಾರು ಫೈರಿಂಗ್ ಮಾಡಿದ್ದಾರೆಂದು ಗೊತ್ತಾಗುತ್ತೆ ಎಂದರು.

ವೈಯಕ್ತಿಕವಾಗಿ ನಾನು ಫೈರಿಂಗ್ ಪ್ರಕರಣವನ್ನು ಖಂಡಿಸುತ್ತೇನೆ. ಗನ್ ಸಂಸ್ಕೃತಿ ಕರ್ನಾಟಕ ರಾಜ್ಯ, ಬಳ್ಳಾರಿಗೆ ಒಳ್ಳೆಯದಲ್ಲ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

Key words: Gun culture, not good, Karnataka, Minister, Santosh Lad