ಚಾಮುಂಡಿ ಬೆಟ್ಟ ಸಂರಕ್ಷಣೆ ಮತ್ತು ಉಳಿವು: ಜ.4 ರಂದು ಜಾಗೃತಿ ಆಂದೋಲನ

ಮೈಸೂರು,ಜನವರಿ,2,2025 (www.justkannada.in):   ಮೈಸೂರಿನ ಚಾಮುಂಡಿ ಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜನವರಿ 4 ರಂದು ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿದೆ.

ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎನ್.ಎಸ್. ರಂಗರಾಜು ಅವರು, ಚಾಮುಂಡಿ ಬೆಟ್ಟದ ಸಂರಕ್ಷಣೆ ಮತ್ತು ಅದರ ಉಳಿವಿಗಾಗಿ ದಿನಾಂಕ 4.1.2026ರಂದು ಬೆಳಗ್ಗೆ 7.30ಕ್ಕೆ ಅನೇಕ ಜನ ನಾಗರೀಕರು, ಪ್ರಜ್ಞಾವಂತರು, ಹಿರಿಯರು, ಕಿರಿಯರು, ವಿಧ್ಯಾರ್ಥಿಗಳು ನಮ್ಮೊಂದಿಗೆ ಸೇರಿಕೊಂಡು ಜಾಗೃತಾ ಆಂದೋಲನವನ್ನು ಆಯೋಜಿಸಲಾಗಿದೆ.

ಚಾಮುಂಡಿ ಬೆಟ್ಟ ಒಂದು ಪ್ರಸಿದ್ಧ ಸ್ವಾಭಾವಿಕ ಉತ್ತಮ ಹಾಗೂ ಶ್ರೇಷ್ಠ ಸ್ಪರ್ಶಕ್ಕೆ ನಿಲುಕುವ ಸಾಂಸ್ಕೃತಿಕ ಪಾರಂಪರಿಕ ಪ್ರದೇಶ (Tangible cultural Heritage) ಹಾಗೂ ಜೀವವೈವಿಧ್ಯಮಯ(Eco-cultural)ವಾದ ಪರಂಪರೆಯುಳ್ಳ ಈ ಬೆಟ್ಟ ಇಂದು ಧಾರ್ಮಿಕತೆಯ ಹೆಸರಿನಲ್ಲಿ ಪ್ರವಾಸೋದ್ಯಮ ಕೇಂದ್ರ, ವ್ಯಾಪಾರಿ ಕೇಂದ್ರ ಮತ್ತು ಧಾರ್ಮಿಕವಲ್ಲದ ಇತರೆ ಚಟುವಟಿಕೆಗಳಿಂದ ತನ್ನ ಸ್ವರೂಪವನ್ನು ಕಳೆದುಕೊಂಡಿದೆ.

ರಾಜ್ಯ ಸರ್ಕಾರ ಚಾಮುಂಡಿ ಬೆಟ್ಟಕ್ಕೆ ಒಂದು ಪ್ರಾಧಿಕಾರವನ್ನು ರಚಿಸಿದ್ದರೂ ಅದಕ್ಕೆ ಸಂಬಂದಿಸಿದ ತಜ್ಞರುಗಳನ್ನು ಸದಸ್ಯರನ್ನಾಗಿ ನೇಮಿಸಿಲ್ಲ. ಯಾವುದೇ ಸಂರಕ್ಷಣೆಯ ಕಾರ್ಯಗಳು ನಡೆಯದೆ ವಿಪರೀತವಾದ ಪ್ರವಾಸಿಗರಿಂದ ಬೆಟ್ಟದ ಪರಂಪರೆ, ಸ್ವಚ್ಛತೆ ಹಾಗೂ ಯಾವುದೇ ನಿಯಂತ್ರಣವಿಲ್ಲದೆ ಬೆಳೆಯುತ್ತಿರುವ ಕಟ್ಟಡಗಳ ನಿರ್ಮಾಣ ಮತ್ತು ಯಾರ ಹಂಗಿಲ್ಲದೆ ಬೆಳೆಯುತ್ತಿರುವ ಸಣ್ಣ ಪುಟ್ಟ ವ್ಯಾಪಾರಸ್ಥರ ಗುಂಪು ಇತ್ಯಾದಿಗಳಿಂದ ಚಾಮುಂಡಿಬೆಟ್ಟದ ಪರಂಪರೆಗೆ ಧಕ್ಕೆಯಾದರೂ ಯಾವುದೇ ವೈಜ್ಞಾನಿಕ ನಿಯಂತ್ರಣಗಳಿಲ್ಲದಂತಾಗಿದೆ.

ಹೀಗಾಗಿ ಜ.4 ರಂದು ನಡೆಯುವ ಜಾಗೃತಿ ಆಂದೋಲನಕ್ಕೆ ಎಲ್ಲರೂ ಕೈ ಜೋಡಿಸುವಂತೆ ಡಾ. ಎನ್.ಎಸ್. ರಂಗರಾಜು ಮನವಿ ಮಾಡಿದ್ದಾರೆ.

Key words: Chamundi Hills, Conservation, Survival, Awareness Campaign, January 4th