ಬಳ್ಳಾರಿ,ಜನವರಿ,2,2026 (www.justkannada.in): ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಜನವರಿ 3 ರಂದು ಅನಾವರಣಕ್ಕೆ ಸಿದ್ದತೆ ನಡೆದಿತ್ತು. ಈ ಸಂಬಂಧ ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಕಟ್ಟುವಾಗ ನಡೆದ ಗಲಾಟೆಯಲ್ಲಿ ಗುಂಡೇಟಿನಿಂದ ರಾಜಶೇಖರ್ ಎನ್ನುವ ಓರ್ವ ಯುವಕ ಬಲಿಯಾಗಿದ್ದಾನೆ.
ಈ ಘಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ ಸಲೀಂ ಅವರಿಂದ ಸಂಪೂರ್ಣವಾದ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಯಾಕೆ ಹೇಗೆ ಆಯ್ತು? ಕಾರಣ ಯಾರು? ಎಂಬ ಮಾಹಿತಿ ಪಡೆದಿದ್ದು ಘಟನೆ ಕುರಿತು ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಿ ಅಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಿ ಎಂದು ಡಿಜಿ&ಐಜಿಪಿ ಸಲೀಂ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Key words: Congress, activist, death, firing, Bellary, CM Siddaramaiah, strict action







