ಬೆಂಗಳೂರು,ಜನವರಿ,1,2025 (www.justkannada.in): ನಗರದ ಕೋಗಿಲು ಲೇಔಟ್ ನಲ್ಲಿ ಅಕ್ರಮ ಶೆಡ್ ಗಳನ್ನ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಇದೀಗ ಅಲ್ಲಿದ್ದ ನಿರಾಶ್ರಿತರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಜೈಬಾ ತಬಸ್ಸುಮ್ ಸೇರಿ ಮತ್ತಿತರರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದು, ಪುನರ್ವಸತಿ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ. 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಇದೀಗ ವಸೀಂ, ಫಕೀರ್ ಕಾಲೋನಿಗಳ ತೆರವಿನಿಂದಾಗಿ ಇಲ್ಲಿನ ಜನರು ನಿರ್ವಸತಿಕರಾಗಿದ್ದಾರೆ. ಹೀಗಾಗಿ ಪುನರ್ವಸತಿ, ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆಗಳ ತೆರವಿನಿಂದ ನಿರಾಶ್ರಿತರಾದವರಿಗೆ ಸರ್ಕಾರ ಮನೆ ನೀಡಲು ಮುಂದಾಗಿದೆ. ಈ ನಡುವೆ ಸ್ಥಳೀಯರಿಗೆ ಮಾತ್ರ ಮನೆ ನೀಡುವುದಾಗಿ ಸರ್ಕಾರ ತಿಳಿಸಿದ್ದು, ನಿರಾಶ್ರಿತರ ದಾಖಲೆಗಳನ್ನ ಪರಿಶೀಲನೆ ನಡೆಸಿದೆ. ಈ ಮಧ್ಯೆ ಅಕ್ರಮ ವಲಸಿಗರಿಗೆ ಮನೆ ನೀಡದಂತೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
Key words: Kogilu, illegal shed, eviction, Refugees, High Court







