ಬಜೆಟ್ ನಲ್ಲಿ ಎಲ್ಲಾ ಸಮಾಜದ ಮಠಗಳಿಗೆ ಸೂಕ್ತ ಅನುದಾನ ನೀಡಲಿ- ಪ್ರಣವಾನಂದ ಸ್ವಾಮೀಜಿ.

ಕಲಬುರಗಿ,ಜನವರಿ,1,2026 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ  ಎಲ್ಲಾ ಸಮಾಜದ ಮಠಗಳಿಗೆ ಸೂಕ್ತ ಅನುದಾನ ನೀಡಲಿ ಎಂದು ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ.  ಸಮಾನತೆ ಸಾಮಾಜಿಕ, ನೈತಿಕತೆ ಮೇಲೆ ಅಧಿಕಾರಕ್ಕೆ ಬಂದಿದೆ. ಬಜೆಟ್ ನಲ್ಲಿ ಎಲ್ಲಾ ಸಮಾಜದ ಮಠಗಳಿಗೆ ಸೂಕ್ತ  ಅನುದಾನ ನೀಡಲಿ.  ಮಠಗಳಿಗೆ ನೀಡುವ ಅನುದಾನದಲ್ಲಿ ವ್ಯತ್ಯಾಸ ಮಾಡಬಾರದು ಎಂದು ಒತ್ತಾಯಿಸಿದರು.

ಎಲ್ಲಾ ಸಮಾಜದ ಮಠಗಳಿಗೆ ಒಂದೇ ಅನುದಾನ ಕೊಡಿ ಇಲ್ಲವಾದರೆ ಯಾವ ಸಮಾಜದ ಮಠಗಳಿಗೂ ಹಣ ನೀಡವೇಡಿ. ಕಾರವಾರದಲ್ಲಿ ಗುಡ್ಡ ಕುಸಿದು ಈಡಿಗ ಸಮಾಜದ 7 ಜನ ಮೃತಪಟ್ಟರು.  ಮೃತರ ಕುಟುಂಬ ಸದಸ್ಯರಿಗೆ ಈ ಸರ್ಕಾರ ಯಾವುದೇ ಸಹಾಯ ಮಾಡಿಲ್ಲ.  ಈಗ ಕೋಗಿಲು ನಿರಾಶ್ರಿತರಿಗೆ ಮನೆ ನೀಡುತ್ತಿದ್ದಾರೆ. ಸಹಾಯ ಮಾಡಲಿ ಬೇಡ ಎನ್ನಲ್ಲ.  ಅಹಿಂದ ನಾಯಕ ಸಿದ್ದರಾಮಯ್ಯ ಎಲ್ಲರಿಗೂ ಸಮಾನ ನ್ಯಾಯ ಒದಗಿಸಬೇಕು ಎಂದು ಪ್ರಣವಾನಂದ ಸ್ವಾಮೀಜಿ ಸಲಹೆ ನೀಡಿದರು.

Key words: Appropriate, funding, Mutt, budget, Pranavananda Swamiji