ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷಾಚರಣೆ

ಮೈಸೂರು,ಜನವರಿ,1,2026 (www.justkannada.in): ಮೈಸೂರಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ರಸ್ತೆಬದಿಯಲ್ಲಿ ಮಲಗಿದ್ದ ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸವರ್ಷಾಚರಣೆ ಮಾಡಲಾಯಿತು.

ನಗರದ ಬಂಡಿಪಾಳ್ಯ ತರಕಾರಿ ಮಾರ್ಕೆಟ್ ಸುತ್ತಮುತ್ತ ಮಲಗಿರುವ ನಿರಾಶ್ರಿತರಿಗೆ ಹೊದಿಕೆಯನ್ನು  ವಿತರಿಸುವ ಮೂಲಕ ವಿಶೇಷವಾಗಿ ಹೊಸವರ್ಷವನ್ನು ಕೆಎಂಪಿಕೆ ಟ್ರಸ್ಟ್ ವತಿಯಿಂದ ಆಚರಿಸಲಾಗಿದ್ದು, ಯುವಕರು ಈ ಕಾರ್ಯಕ್ಕೆ ಕೈಜೋಡಿಸಿದ ಮಾನವೀಯತೆ ಮೆರೆದರು. ಸುಮಾರು 50 ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬಿಜೆಪಿ ಮುಖಂಡ ಜೋಗಿ ಮಂಜು, ಕಾಂಗ್ರೆಸ್ ಮುಖಂಡ ಜಿ ರಾಘವೇಂದ್ರ, ರಂಗಭೂಮಿ ಕಲಾವಿದ ಅಮಿತ್, ನಿರುಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ರಾಕೇಶ್, ಮಂಜುನಾಥ್ , ಹರೀಶ್ ನಾಯ್ಡು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Key words: New Year, celebrated, distributing, Bedshit, Refugee, Mysore