ಬೆಂಗಳೂರು,ಜನವರಿ,1,2025 (www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಜೋರಾಗಿ ನಡೆದಿದ್ದು, ಈ ಮಧ್ಯೆ ಒಂದೇ ದಿನ ನಮ್ಮ ಮೆಟ್ರೋಗೆ ಸುಮಾರು 3.8 ಕೋಟಿ ರೂ. ಆದಾಯ ಹರಿದು ಬಂದಿದೆ.
ಈ ಕುರಿತು ಬಿಎಂಆರ್ ಸಿಎಲ್ ಸಿಪಿಆರ್ ಒ ಯಶವಂತ ಚವ್ಹಾಣ್ ಮಾಹಿತಿ ನೀಡಿದ್ದು, ಒಂದೇ ದಿನ ನಮ್ಮ ಮೆಟ್ರೋಗೆ 3.8ಕೋಟಿ ಆದಾಯ ಸಿಕ್ಕಿದೆ. ಸಾಮಾನ್ಯ ದಿನಕ್ಕಿಂತ ಹಚ್ಚುವರಿಯಾಗಿ 1ಕೋಟಿ ಆದಾಯವಾಗಿದೆ ಎಂದು ತಿಳಿಸಿದ್ದಾರೆ.
ನಿನ್ನೆಯಿಂದ ಇಂದು ಮುಂಜಾನೆ 3 ಗಂಟೆವರೆಗೆ ನಮ್ಮ ಮೆಟ್ರೋ ಸಂಚಾರ ನಡೆಸಿತ್ತು. ನಿನ್ನೆ ಮುಂಜಾನೆಯಿಂದ ರಾತ್ರಿ 11 ಗಂಟವರೆಗೆ ನಮ್ಮ ಮೆಟ್ರೋದಲ್ಲಿ 8.93 ಲಕ್ಷ ಜನ ಸಂಚರಿಸಿದ್ದಾರೆ. ರಾತ್ರಿ 11ರಿಂದ 40774 ಜನರು ಸಂಚಾರ ಮಾಡಿದ್ದಾರೆ. ಕ್ರಿಸ್ ಮಸ್ ರಜೆ ಹಿನ್ನೆಲೆಯಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮೆಟ್ರೊ ಪ್ರಯಾಣಿಕರ ಸಂಖ್ಯೆ 7 ಲಕ್ಷದಿಂದ 6 ಲಕ್ಷಕ್ಕೆ ಇಳಿದಿತ್ತು. ಸಾಮಾನ್ಯ ದಿನಗಳಲ್ಲಿ 2.7 ಕೋಟಿ ರೂ. ಆದಾಯವಿತ್ತು. ನಿನ್ನೆ ಒಂದೇ ದಿನ ನಮ್ಮ ಮೆಟ್ರೋಗೆ 3.8 ಕೋಟಿ ಆದಾಯ ಬಂದಿದೆ. ನಮ್ಮ ಮೆಟ್ರೋದಲ್ಲಿ ನಿನ್ನೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಬಿಎಂಆರ್ ಸಿಎಲ್ ಸಿಪಿಆರ್ ಒ ಯಶವಂತ ಚವ್ಹಾಣ್ ತಿಳಿಸಿದ್ದಾರೆ.
Key words: New Year, Celebration, Namma Metro, Rs 3.8 crore, single day







