ಅಕ್ರಮ ನಿವಾಸಿಗಳಿಗೆ ಮನೆ: ಕೇರಳ ಚುನಾವಣೆಗೆ ಅನುಕಂಪ ಆಧಾರಿತ ಕ್ರಮ- ಮಾಜಿ ಸಚಿವ ಸುರೇಶ್ ಕುಮಾರ್

ಬೆಂಗಳೂರು,ಜನವರಿ,1,2026 (www.justkannada.in): ಕೋಗಿಲು ಲೇಔಟ್ ನಲ್ಲಿ ಅಕ್ರಮ ನಿವಾಸಿಗಳಿಗೆ ಸರ್ಕಾರ ಮನೆ ಕೊಡಲು ಮುಂದಾಗಿರುವುದು ಕೇರಳ ಚುನಾವಣೆಗೆ ಇದು ಅನುಕಂಪದ ಕ್ರಮವಾಗಿದೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಸುರೇಶ್ ಕುಮಾರ್, ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿರುವುದು ಕಾಂಗ್ರೆಸ್ ತುಷ್ಟೀಕರಣದ ನೀತಿ.  ಕೇರಳ ಚುನಾವಣೆಗೆ ಇದು ಅನುಕಂಪದ ಕ್ರಮ. ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕೆಸಿ ವೇಣುಗೋಪಾಲ್, ಸ್ಪರ್ಧೆಗೆ ಬಿದ್ದಿದ್ದಾರೆ. ಕರ್ನಾಟಕ ಸಂತ್ರಸ್ತರಿಗೆ ಸುಣ್ಣ ಕೇರಳದವರಿಗೆ ಬೆಣ್ಣೆ ಎಂದು ಟೀಕಿಸಿದರು.

ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್, ಕೇರಳ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್ ಹೇಳಿದಂತೆ ಸರ್ಕಾರ ಕೇಳುತ್ತಿದೆ.   ಐದಾರು ವರ್ಷದಿಂದ ಅರ್ಜಿ ಹಾಕಿದವರಿಗೆ ಮೊದಲು ಮನೆ ಕೊಡಬೇಕು. ಯಾವುದೇ  ವಿಶೇಷ ಪ್ರಕರಣಗಳಿದ್ದರೂ ನಾಳೆಯೆ ಮನೆ ಕೊಡಲು ಆಗಲ್ಲ.   ವೋಟಿಗಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Key words:  Houses, illegal residents, Kerala elections, Former Minister, Suresh Kumar