ಹೊಸ ವರ್ಷದ ಸಂಭ್ರಮ: ರಾಷ್ಟ್ರಪತಿ, ಮುರ್ಮು, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಶುಭಾಶಯ

ಬೆಂಗಳೂರು,ಜನವರಿ,1,2026 (www.justkannada.in):  ಇಂದು ಹೊಸವರ್ಷ 2026 ಸಂಭ್ರಮ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಗಣ್ಯರು ದೇಶದ ಜನರಿಗೆ ಶುಭ ಕೋರಿದ್ದಾರೆ .

ಹೊಸ ವರ್ಷಕ್ಕೆ ಶುಭಕೋರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶ ಮತ್ತು ವಿದೇಶಗಳಲ್ಲಿರುವ ಎಲ್ಲಾ ಭಾರತೀಯರಿಗೆ ಶುಭವಾಗಲಿ ಎಂದಿದ್ದಾರೆ.

‍ಹಾಗೆಯೇ ಪ್ರಧಾನಿ ಮೋದಿ  ಟ್ವೀಟ್ ಮಾಡಿ, ‘2026 ಎಲ್ಲರ ಪಾಲಿಗೆ ಉತ್ತಮ ವರ್ಷವಾಗಿರಲಿ ಎಂದು ಹಾರೈಸುವೆ. ನಿಮ್ಮ ಪ್ರಯತ್ನಗಳಿಗೆ ಯಶಸ್ಸನ್ನು, ನೀವು ಮಾಡುವ ಪ್ರತಿಯೊಂದರಲ್ಲೂ ಗೆಲುವಿನೊಂದಿಗೆ ಉತ್ತಮ ಆರೋಗ್ಯ ಹಾಗೂ ಸಮೃದ್ಧಿಯನ್ನು ತರಲಿ. ಸಮಾಜದಲ್ಲಿ ಶಾಂತಿ, ಸಂತೋಷ ನೆಲೆಸಲಿ ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಹೊಸವರ್ಷಕ್ಕೆ ಶುಭಕೋರಿದ್ದು, ದೇಶದ ಜನರು ಮುಂದಿನ ವರ್ಷ ಕೈಗೊಳ್ಳಬೇಕಿರುವ ಸಂಕಲ್ಪದ ಕುರಿತು ಕರೆ ನೀಡಿದ್ದಾರೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಟ್ವೀಟ್ ಮಾಡಿ  ‘ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ನಿಮ್ಮ ಜೀವನದಲ್ಲಿ ಅಪಾರ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ತರಲಿ. ಕೆಲಸ ಮಾಡುವ ಹಕ್ಕು, ಮತದಾನದ ಹಕ್ಕು, ಘನತೆಯಿಂದ ಬದುಕುವ ಹಕ್ಕು ಸೇರಿದಂತೆ ದುರ್ಬಲರ ಹಕ್ಕುಗಳನ್ನು ರಕ್ಷಿಸಲು ನಾವೆಲ್ಲರೂ ಸಾಮೂಹಿಕ ಚಳವಳಿ ಮಾಡೋಣ. ಒಗ್ಗಟ್ಟಾಗಿ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸೋಣ ಎಂದು ಕರೆ ನೀಡಿದ್ದಾರೆ.

Key words: New Year 2026, President, Murmu, PM, Modi, Wishes