ಕೋಗಿಲು ನಿರಾಶ್ರಿತರಿಗೆ ಮನೆ: ರಾಜ್ಯಪಾಲರಿಗೆ ದೂರು ನೀಡುತ್ತೇವೆ- ಶಾಸಕ ಎಸ್.ಆರ್ ವಿಶ್ವನಾಥ್

ಬೆಂಗಳೂರು,ಡಿಸೆಂಬರ್,31,2025 (www.justkannada.in): ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಅಕ್ರಮ ಶೆಡ್ ಗಳನ್ನು ತೆರವು ಮಾಡಿ ಅಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿರುವ ರಾಜ್ಯಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಮಧ್ಯೆ ಇಂದು ಬಿಜೆಪಿ ನಿಯೋಗ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್, ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದಿದ್ದಾರೆ.

ನನ್ನ ಯಲಹಂಕ ಕ್ಷೇತ್ರದಲ್ಲಿ ಸಹ ಸರ್ಕಾರ ಮನೆಗಳನ್ನ ಕಟ್ಟುತ್ತಿದೆ. 10 ಲಕ್ಷ ಬೆಳೆಬಾಳುವ ಮನೆಯನ್ನ 2.5 ಲಕ್ಷಕ್ಕೆ ಕೊಟ್ಟರೇ ಏನರ್ಥ.  ಸರ್ಕಾರ ಹೀಗೆ ಮಾಡಿದರೇ ಎಲ್ಲರು ಜಾಗ ಅತಿಕ್ರಮಣ ಮಾಡುತ್ತಾರೆ.  ಆಗ ಜಿಬಿಎ ಅಧಿಕಾರಿಗಳು ಬಂದು  ಅಕ್ರಮನಿವಾಸಿಗಳನ್ನ ತೆರವು ಮಾಡ್ತಾರೆ.  ಬಳಿಕ ಅವರಿಗೆ ನೀವು ಮನೆ ಕೊಡುತ್ತಾ ಹೋದರೆ ಹೇಗೆ.  ಈ ಬಗ್ಗೆ ನಾವು ಬಿಜೆಪಿ ವತಿಯಿಂದ ರಾಜ್ಯಪಾಲರಿಗೂ ದೂರು ನೀಡುತ್ತೇವೆ ಎಂದರು.

Key words: Kogilu layout, Refugees, House, MLA, S.R. Vishwanath