ಅಕ್ರಮ ನಿವಾಸಿಗಳಿಗೆ ಮನೆ: ಇದು ಸರ್ಕಾರದ ದಡ್ಡತನದ ಪರಮಾವಧಿ- ಕೇಂದ್ರ ಸಚಿವ ವಿ.ಸೋಮಣ್ಣ

ನವದೆಹಲಿ,ಡಿಸೆಂಬರ್,31,2025 (www.justkannada.in):  ಕೊಗಿಲು ಲೇಔಟ್ ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ . ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಕುಟುಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಪಕ್ಕದ ರಾಜ್ಯದ ಒತ್ತಡಕ್ಕೆ ಮಣಿದು ಸರ್ಕಾರ ಮನೆ ನೀಡುತ್ತಿದೆ.  ಇದು ರಾಜ್ಯ ಸರ್ಕಾರದ ದಡ್ಡತನದ ಪರಾಮಾವಧಿ.  2ನೇ ಅವಧಿಗೆ ಸಿಎಂ ಆದ ಬಳಿಕ ಸಿಎಂ ಸಿದ್ದರಾಮಯ್ಯ ಬಹಳ ಬದಲಾವಣೆಯಾಗಿದ್ದಾರೆ.  ಮೊದಲಿನ ಸಿದ್ದರಾಮಯ್ಯ ಅಲ್ಲ. ಈಗ ಅವರು ಬದಲಾಗಿದ್ದಾರೆ.  ವಲಸೆ ಜನರಿಗೆ ಕೂಡಲೇ ಮನೆ ನೀಡಲು ಸಕಾರಣವೇನು?  ನಮ್ಮ ವಿರುದ್ದ ಮಾತನಾಡಲು ಕೇರಳ ಸರ್ಕಾರಕ್ಕೆ ಏನು ನೈತಿಕತೆ ಇದೆ?  ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ಥರಿಗೆ ಈವರೆಗೂ ಮನೆ ನೀಡಿಲ್ಲ. ಅಲ್ಲಿನ ಜನರ ಪರಿಸ್ಥಿತಿಯನ್ನ ಕಾಂಗ್ರೆಸ್ ಸರ್ಕಾರ ನೋಡಿಲ್ಲ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದೇನೆ.  ಅಂತಾ ಅನ್ನಿಸುತ್ತಿಲ್ಲವೇ?  ಕೇರಳದಲ್ಲಿ ಚುನಾವಣೆ ಇದೆ ಅಂತಾ ಈ ರೀತಿ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.

ಬಲ ಕಡಿಮೆ ಮಟ್ಟದಲ್ಲಿ ರೈಲ್ವೆ ಟಿಕೆಟ್ ದರ ಏರಿಕೆ ಆಗಿದೆ. ನಮ್ಮ ಸೇವೆಗಳನ್ನ ಇಡೀ ವಿಶ್ವವೇ ಮೆಚ್ಚುಕೊಂಡಿದೆ. ಕೋವಿಡ್ ಸಮಯದಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಿದ್ದವು.  ಈಗಿನ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಲಾರದು ಎಂದು ವಿ.ಸೋಮಣ್ಣ ತಿಳಿಸಿದರು.

Key words: Houses, illegal, residents, government, Union Minister, V. Somanna