ಕುಡಿದು ತೂರಾಡುವವರನ್ನು ಶಿಫ್ಟ್ ಮಾಡೋದು ನಮ್ಮ ಕೆಲಸವಲ್ಲ- ಪೊಲೀಸ್ ಆಯುಕ್ತ ಸೀಮಂತ್ ಕುಮಾರ್

ಬೆಂಗಳೂರು,ಡಿಸೆಂಬರ್,31,2025 (www.justkannada.in):  ಇಂದು ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ವೇಳೆ ಮದ್ಯಪಾನ ಮಾಡಿ ತೂರಾಡುವವರನ್ನ ಪೊಲೀಸರೇ ಮನೆಗೆ ಶಿಫ್ಟ್ ಮಾಡುತ್ತಾರೆ ಎಂಬ ಸುದ್ದಿಯಾಗಿದ್ದು ಇದಕ್ಕೆ ಇದೀಗ ಬೆಂಗಳೂರು ಪೊಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,  ಮದ್ಯಪಾನ ಮಾಡಿ ತೂರಾಡವವರನ್ನ ಮನೆಗೆ ಬಿಡಲ್ಲ ಎಂ.ಜಿ ರಸ್ತೆ ಕೋರಮಂಗಲದಲ್ಲಿ ಕ್ಯಾಬ್, ಆಟೋ ಸಿಗೋದು ಕಷ್ಟ. ಅಲ್ಲಿ ಪೊಲೀಸರು ನಿಗಾ ಇಡಲಿದ್ದಾರೆ.  ಸಹಾಯ ಬೇಕು ಅಂದಾಗ ಖಂಡಿತವಾಗಿ ಪೊಲೀಸರು ಬರುತ್ತಾರೆ ಕುಡಿದ ನಶೆಯಲ್ಲಿರುವವರನ್ನು ಶಿಫ್ಟ್ ಮಾಡೋದು ನಮ್ಮ ಕೆಲಸವಲ್ಲ. ಸಮಸ್ಯೆ ಇದ್ದಾಗ ಖಂಡಿತ ಸಹಾಯಕ್ಕೆ ಬರುತ್ತೇವೆ ಎಂದು ತಿಳಿಸಿದರು.

ಅಶ್ಲೀಲ ಕಮೆಂಟ್ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೂರು , ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸರಿಯಾಗಿ ಕ್ರಮ ಆಗಿಲ್ಲ ಎಂಬುದು ಸುಳ್ಳು ಈ ಪ್ರಕರಣದಲ್ಲಿಯೂ ಅಲ್ಲ ಬೇರೆ ಪ್ರಕರಣದಲ್ಲೂ ಅಷ್ಟೆ ಸಿಸಿಬಿ ಲೆವೆಲ್ ನಲ್ಲೇ ಎಫ್ ಐಆರ್ ದಾಖಲಾಗಿದೆ.  ಡಿಸಿಎಂ ಹಂತದಲ್ಲೇ ತನಿಖೆ ಆಗುತ್ತಿದೆ. ಪೊಲೀಸರು ಎಲ್ಲರಿಗೋಸ್ಕರ ಇದ್ದೇವೆ ಎಂದರು.

Key words: New year, shift, drunker, Police Commissioner, Seemanth Kumar