ಚಾಮರಾಜನಗರ,ಡಿಸೆಂಬರ್,31,2025 (www.justkannada.in): ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಹಾಗೂ ನಾಲ್ಕು ಮರಿಗಳ ಸೆರೆಗಾಗಿ ಕೂಂಬಿಂಗ್ ನಡೆಸಿದ ವೇಳೆ ಬೇರೆ ಗಂಡುಹುಲಿ ಸೆರೆ ಸಿಕ್ಕಿದೆ. 
ಚಾಮರಾಜನಗರದಲ್ಲಿ ಚಾಮರಾಜನಗರ ತಾಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಕೊಟ್ಟು ಸೆರೆ ಹಿಡಿದಿದ್ದಾರೆ. ಕಳೆದ 10 ದಿನಗಳಿಂದ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳ ಸೆರೆಗೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆಗಿಳಿದಿದ್ದರು.
ಬಿಳಿಗಿರಿರಂಗನ ಬೆಟ್ಟ ಹುಲಿಸಂರಕ್ಷಿತಾರಣ್ಯದ ಅಧಿಕಾರಿಗಳು ಹುಲಿ ಸೆರೆ ಕಾರ್ಯಾಚರಣೆಗೆ ಐದು ಸಾಕಾನೆಗಳನ್ನು ತರಿಸಿ 100 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಚಾಮರಾಜನಗರ ತಾಲೂಕಿನ ನಂಜೇದೇವನಪುರ, ಉಡಿಗಾಲ,ವೀರನಪುರ,ಕೆಕೆ ಹುಂಡಿ ಸೇರಿ ಏಳು ಗ್ರಾಮದಲ್ಲಿ ಹುಲಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಆದರೆ ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದ ಜಮೀನಿನಲ್ಲಿ ಮತ್ತೊಂದು ಬೇರೆ ಹುಲಿ ಸೆರೆಯಾಗಿದೆ.
Key words: Forest Department, operation, Another, tiger, captured







