ಮೈಸೂರು,ಡಿಸೆಂಬರ್,31,2025 (www.justkannada.in): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿ ಜನರಲ್ಲಿ ಅರಿವು ಮೂಡಿಸಿದರು.
ಮೈಸೂರು ವಿಭಾಗದ ಅಬಕಾರಿ ಅಧೀಕ್ಷಕ ವಿವೇಕ್.ಜಿ, ಅಬಕಾರಿ ಉಪ ಅಧೀಕ್ಷಕ ಹೆಚ್.ಕೆ.ರಮೇಶ್ ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರುಗಳು ಹಾಗೂ ಉಪ ನಿರೀಕ್ಷಕರುಗಳು ಮತ್ತು ಮೈಸೂರು ನಗರ ಜಿಲ್ಲೆಯ ಎಲ್ಲಾ ವಲಯದ ಎಲ್ಲಾ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೈಸೂರು ನಗರ ವ್ಯಾಪ್ತಿಯಲ್ಲಿ 2026 ರ ಹೊಸ ವರ್ಷದ ಆಚರಣೆಯ ಪ್ರಯುಕ್ತ ನಡೆಯಬಹುದಾದ ಅಬಕಾರಿ ಅಕ್ರಮ ಮಾರಾಟವನ್ನ ತಡೆಗಾಗಿ ದಾಳಿ ನಡೆಸಿ ಪರಿಶೀಲಿಸಿದರು.
ಮೈಸೂರು ನಗರ ಜಿಲ್ಲೆಯ ಆಲಿಮ್ ನಗರ, ಸಾಯಿಬಾಬಾಕಾಲೋನಿ, ಅಬ್ದುಲ್ ಕಲಾಂನಗರ, ವಂದೇ ಮಾತರಂ ಕಾಲೋನಿ-1 ಮತ್ತು 2 ಹಾಗೂ ಎಲ್ಲಮ್ಮ ಕಾಲೋನಿ ಮತ್ತು ಬೆಲವತ್ತ ಗ್ರಾಮಗಳಲ್ಲಿ ಸಾಮೂಹಿಕ ದಾಳಿ ನಡೆಸಿದ್ದು, ಆದರೆ ಯಾವುದೇ ಅಬಕಾರಿ ಅಕ್ರಮ ಮತ್ತು ಮಾದಕ ವಸ್ತುಗಳು ದಾಳಿ ಸಮಯದಲ್ಲಿ ಪತ್ತೆಯಾಗಿಲ್ಲ.
ದಾಳಿ ನಡೆಸಿದ ಎಲ್ಲಾ ಸ್ಥಳಗಳಲ್ಲಿ ಅಬಕಾರಿ ಅಕ್ರಮಗಳ ಬಗ್ಗೆ ಹಾಗೂ ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ, ಸೇವನೆ, ಹೊಂದುವಿಕೆ ಅಥವಾ ಇವರುಗಳಿಗೆ ಸಹಾಯ ಮಾಡುವುದು ಕಂಡುಬಂದಲ್ಲಿ ಅಬಕಾರಿ ಇಲಾಖೆಯಿಂದ ಕಠಿಣಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಅಧಿಕಾರಿಗಳು ಸೂಚನೆ ನೀಡಿದರು. ಇದೇ ವೇಳೆ ಮಾದಕ ವಸ್ತುಗಳ ಹಾಗೂ ಅಬಕಾರಿ ಅಕ್ರಮಗಳ ಬಗ್ಗೆ ಹಾಗೂ ಕಾನೂನು ಶಿಕ್ಷೆಯ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಲಾಯಿತು. ಈ ಸಂಬಂಧ ಅಬಕಾರಿ ಅಕ್ರಮಗಳು ಮತ್ತು ಮಾದಕ ವಸ್ತುಗಳ ಬಗ್ಗೆ ಅಕ್ರಮ ಕಂಡುಬಂದರೆ ಕೂಡಲೇ ಅಬಕಾರಿ ಇಲಾಖೆಗೆ ತಿಳಿಸುವಂತೆ ಸೂಚಿಸಿದರು.
Key words: Mysore, New Year, celebrations, Raids, inspections, Excise Department







