ಕಲಬುರಗಿ,ಡಿಸೆಂಬರ್,30,2025 (www.justkannada.in): ಕಕ್ಷಿದಾರರೊಬ್ಬರ ಪರವಾಗಿ ಉತ್ತಮವಾಗಿ ವಾದ ಮಂಡಿಸಲು ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರದ ಎರಡನೇ ಪಿಡಿಜೆ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಾಜಮಹೇಂದ ಜಿ. ಲೋಕಾಯುಕ್ತ ಬಲೆಗೆ ಬಿದ್ದ ಎರಡನೇ ಪಿಡಿಜೆ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ. ಕಕ್ಷಿದಾರರೊಬ್ಬರ ಪರವಾಗಿ ಉತ್ತಮವಾಗಿ ವಾದ ಮಂಡಿಸಲು ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿ, ₹ 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಕಂದನುಲಿ ಗ್ರಾಮದ ಕಕ್ಷಿದಾರ ನವೀನ್ ಅನಂತಯ್ಯ ಎಂಬುವವರು ದಾಖಲಿಸಿದ್ದ ಜಾತಿನಿಂದನೆ ಪ್ರಕರಣವನ್ನು ರಾಜಮಹೇಂದ್ರ ಅವರು ನಿರ್ವಹಿಸುತ್ತಿದ್ದರು. ಪ್ರಕರಣದಲ್ಲಿ ಉತ್ತಮವಾಗಿ ವಾದ ಮಾಡಲು 50 ಸಾವಿರ ರೀ. ಲಂಚ ನೀಡುವಂತೆ ನವೀನ್ ಗೆ ಆರೋಪಿ ರಾಜಮಹೇಂದ್ರ ಬೇಡಿಕೆ ಇಟ್ಟಿದ್ದರು. ಈಗಾಗಲೇ 20 ಸಾವಿರ ರೂ. ಹಣವನ್ನೂ ಪಡೆದಿದ್ದರು.
ಉಳಿದ ಹಣಕ್ಕೆ ಬೇಡಿಕೆ ಇಟ್ಟಾಗ ಬೇಸತ್ತ ನವೀನ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಡಿವೈಎಸ್ಪಿ ಶೀಲವಂತ ಅವರು ರಾಜಮಹೇಂದ ಜಿ 25 ಸಾವಿರ ರೂ. ಲಂಚ ಸ್ವೀಕರಿಸುವಾಗ ದಾಳಿ ನಡೆಸಿ ವಶಕ್ಕೆ ಪಡೆದರು.
Key words: PP, accepting, bribe, Lokayukta, trap







