ಬೆಂಗಳೂರು,ಡಿಸೆಂಬರ್,30,2025 (www.justkannada.in): ಕೊಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ, ಯಾರಿಗಾಗಿ ಸರ್ಕಾರ ನಡೆಯುತ್ತಿದೆ ಎಂಬುದು ನಮ್ಮ ಪ್ರಶ್ನೆ. ಕರ್ನಾಟಕ ಸರ್ಕಾರದ ಮೂಗುದಾರ ಎಲ್ಲಿದೆ? ಕರ್ನಾಟಕ ವಿಚಾರದಲ್ಲಿ ವೇಣುಗೋಪಾಲ್ ಮೂಗು ತೂರಿಸುತ್ತಿದ್ದಾರೆ. ಏನು ಮಾಡಬೇಕು ಏನು ಮಾಡಬಾರದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳ್ತಾರೆ. ಅಡಳಿತ ಹೇಗೆ ನಡೆಸಬೇಕೆಂದು ನಿರ್ದೇಶನ ಕೊಡುವವರು ಯಾರು? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಆಡಳಿತ ಮಾಡುವ ಶಕ್ತಿ ಇದೆಯೋ? ಇಲ್ವೋ? ಎಂದು ಕಿಡಿಕಾರಿದರು.
ಅಕ್ರಮ ವಲಸಿಗರ ಮನೆ ತೆರವು ಮಾಡಿದ್ದು ಒಳ್ಳೆಯ ಕೆಲಸ. ರಾಜ್ಯದ ಅಕ್ರಮ ವಲಸಿಗರನ್ನ ಹೊರ ಹಾಕಬೇಕು. ಈ ಬಗ್ಗೆ ಕೇರಳದ ಯುಡಿಎಫ್ ಎಲ್ ಡಿಎಫ್ ನಿರ್ಧಾರ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಹರಿಹಾಯ್ದರು.
Key words: government, CM Siddaramaiah, DCM, DK Shivakumar, Union Minister, Shobha Karandlaje







