ಕೋಗಿಲು ಲೇಔಟ್ ನ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ, ಪರಿಹಾರ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಡಿಸೆಂಬರ್,30,2025 (www.justkannada.in): ಕೋಗಿಲು ಲೇಔಟ್ ನಲ್ಲಿ ಅಕ್ರಮ ಶೆಡ್ ತೆರವು ಹಿನ್ನೆಲೆಯಲ್ಲಿ, ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕೊಡುವ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಈ ಬಗ್ಗೆ ಪರಿಶೀಲನೆ ಮಾಡಿಯೇ ತೀರ್ಮಾನ ಮಾಡಿದ್ದಾರೆ. ನಿನ್ನೆ ಸಿಎಂ ಮತ್ತು ಡಿಸಿಎಂ ಸಭೆ ಮಾಡಿದ್ದಾರೆ. ಮನೆ ಕಳೆದು ಕೊಂಡವರಿಗೆ ಪರಿಹಾರ ಮನೆ ನೀಡುವ ಬಗ್ಗೆ  ನಿನ್ನೆಯ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ತಿಳಿಸಿದರು.

ಕೋಗಿಲು ಲೇ ಔಟ್ ನಲ್ಲಿ ಅಕ್ರಮ ಶೆಡ್ ತೆರವು ಹಿನ್ನೆಲೆ ನಿರಾಶ್ರಿತ ನಿವಾಸಿಗಳಿಗೆ ಪರಿಹಾರ ಮನೆ ನೀಡಲು ನಿರಾಶ್ರಿತರಿಂದ ದಾಖಲೆ ಸಂಗ್ರಹ ಕಾರ್ಯ ನಡೆಯುತ್ತಿದೆ.

Key words: Home Minister, Parameshwar, homes, Kogilu Layout