ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು – ಡಾ.ಈ.ಸಿ. ನಿಂಗರಾಜ್ ಗೌಡ.

ಮೈಸೂರು,ಡಿಸೆಂಬರ್,29,2025 (www.justkannada.in): ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ, ವರಕವಿ ಬೇಂದ್ರೆಯವರಿಂದ “ಯುಗದ ಕವಿ ಜಗದ ಕವಿ” ಎನಿಸಿಕೊಂಡವರು ಮತ್ತು ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದವರು ರಾಷ್ಟ್ರಕವಿ ಕುವೆಂಪು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಬಣ್ಣಿಸಿದರು.

ಕುವೆಂಪುನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ಅವರು ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನ, ವಿಶ್ವಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಈ.ಸಿ.ನಿಂಗರಾಜ್ ಗೌಡರವರು,  ಕುವೆಂಪು ಅವರು ತಮ್ಮ ಬದುಕಿನ ಉತ್ತರಾರ್ಧದಲ್ಲಿ ವಿಶ್ವಮಾನವ ಸಂದೇಶ ಪ್ರಚಾರದ ವ್ರತ ಕೈಗೊಂಡಿದ್ದರು. ಯಾರೇ ಕಾರ್ಯಕ್ರಮಕ್ಕೆ ಕರೆಯಲು ಹೋದರೂ ವಿಶ್ವಮಾನವ ಸಂದೇಶದ ಪ್ರತಿಗಳನ್ನು ನೀಡಿ, ಇದರ ಪ್ರತಿಗಳನ್ನು ಮುದ್ರಿಸಿ ಹಂಚಿ ಎಂದು ಸಲಹೆ ನೀಡುತ್ತೀದ್ದರು. ಅದರ ಜೊತೆಯಲ್ಲಿಯೇ “ಎಲ್ಲದರೂ ಇರು, ಎಂಥಾದರೂ ಇರು, ಎಂದೆಂದಿಗೂ ಕನ್ನಡವಾಗಿರೂ” ಎಂದು ತಮ್ಮ ಕವನದ ಮೂಲಕ ಕುವೆಂಪುರವರು ನಮಗೆಲ್ಲರಿಗೂ ಸಂದೇಶ ನೀಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಲ್. ದೇವೆಗೌಡ ಅವರು ವಹಿಸಿದ್ದರು. ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್ ಅವರು ಕುವೆಂಪುರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಶಿವಕುಮಾರ್ , ಮಾಜಿ ನಗರಪಾಲಿಕೆ ಸದಸ್ಯರಾದ ಕೆ.ವಿ. ಮಲ್ಲೇಶ್, ಜೆ.ಎಸ್. ಜಗದೀಶ್, ಉದ್ಯಮಿಗಳಾದ ಏಕನಾಥ್ ರೈ, ವೈ.ಎಸ್. ಪ್ರಾರ್ಪಟಿಸ್ ಮಾಲೀಕರಾದ ಕೆ.ಎನ್.ಸಂತೋಷ್, ಪುಣ್ಯಶ್ರೀ ಎಂಟರ್ ಪ್ರೈಸಸ್ ನ ಎಂ.ಮೋಹನ್, ಮಾಜಿ ಸೆನಟ್ ಸದಸ್ಯ ಜಗದೀಶ್, ಎಂ.ರಾಜೀವ್, ಕಿರಣ್ ಕುಮಾರ್, ರಮೇಶ್, ರಾಮಪ್ಪ ಎಸ್.ಎನ್. ರಮೇಶ್, ರಘರಾಮ್ ಗೌಡ, ವಿಠ್ಠಲ್, ರಾಮು, ನಿಂಗಪ್ಪ, ಜಗದೀಶ್, ಎಂ.ಬಿ.ಮಂಜೇಗೌಡ, ವಕೀಲರಾದ ಕೆ.ಎಸ್. ನಾಗರಾಜು, ಸಂಸ್ಥೆಯ ಖಜಾಂಚಿ ಟಿ.ಕೃಷ್ಣಕುಮಾರ್, ಕಾರ್ಯದರ್ಶಿ ಚರಣ್ ಶಿವರಾಜ್, ಬಸವರಾಜು, ಎಂ.ರಮೇಶ್  ಮತ್ತಿತರರು ಉಪಸ್ಥಿತರಿದ್ದರು.

Key words:  great, national poet, universal humanity, Kuvempu, Dr. E.C. Ningaraj Gowda