ಮೈಸೂರು,ಡಿಸೆಂಬರ್,29,2025 (www.justkannada.in): ಸಾಂಸ್ಕೃತಿಕ ನಗರಿ ಮೈಸೂರು ಶಾಂತಿಯುತವಾದ ನಗರ ಎಂದೇ ಖ್ಯಾತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದರೋಡೆ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಮೈಸೂರಿನಲ್ಲಿ ಇದವರೆಗೆ ಹಲವು ದೊಡ್ಡ ಮಟ್ಟದ ದರೋಡೆಗಳು ನಡೆದಿವೆ. 
ಇಲವಾಲದಲ್ಲಿ ಕೇರಳ ಬಸ್ ನಲ್ಲಿ ದರೋಡೆ ಪ್ರಕರಣ, ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಚಿನ್ನದ ಅಂಗಡಿ ದರೋಡೆ ಪ್ರಕರಣ, ಎಚ್.ಡಿ.ಕೋಟೆ ರಸ್ತೆಯಲ್ಲಿ ಕಾರಿನಲ್ಲಿ ದರೋಡೆ ಪ್ರಕರಣ ಹಾಗೂ ನಿನ್ನೆ ಹುಣಸೂರಿನ ಸ್ಕೈ ಗೋಲ್ಡ್ & ಡೈಮೆಂಡ್ ಅಂಗಡಿಯಲ್ಲಿ ನಡೆದ ದರೋಡೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
2014 ರಲ್ಲಿ ಇಲವಾಲದ ಬಳಿ ಕೇರಳ ಬಸ್ ಅಡ್ಡಗಟ್ಟಿ ದುಷ್ಕರ್ಮಿಗಳು ದರೋಡೆ ಮಾಡಿ 2.27 ನಗದು, ಚಿನ್ನಾಭರಣ ಕಳವು ಮಾಡಿದ್ದರು. ಪೊಲೀಸರೇ ಕೃತ್ಯದಲ್ಲಿ ಭಾಗಿಯಾಗಿ ಶಿಕ್ಷೆಯನ್ನೂ ಅನುಭವಿಸಿದ್ದರು.
ಜನವರಿ 20, 2025 ರಂದು ಕೇರಳ – ಮೈಸೂರು ರಸ್ತೆಯ ಹಾರೋಹಳ್ಳಿ ಬಳಿ ದರೋಡೆ ಮಾಡಲಾಗಿತ್ತು. ಹಾಡಹಗಲೇ ಕಾರಿನಲ್ಲಿ ತೆರಳುತ್ತಿದ್ದವರ ಮೇಲೆ ಕಾರಿನಿಂದ ಬಂದು ಅಟ್ಯಾಕ್ ಮಾಡಿದ್ದರು. ಜಮೀನು ಖರೀದಿಗೆ ಬಂದವರ ಬಳಿಯಿದ್ದ ಹಣ ಕದ್ದು ಪರಾರಿಯಾಗಿದ್ದರು.
2021 ರ ಆಗಸ್ಟ್ 23 ರಂದು ಹುಣಸೂರು ಮಾದರಿಯಲ್ಲಿ ಮೈಸೂರಿನ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ನಲ್ಲಿ ರಾಬರಿಯಾಗಿತ್ತು. ದುಷ್ಕರ್ಮಿಗಳು ಶೂಟ್ ಮಾಡಿದ್ದರಿಂದ ಚಂದ್ರು ಎಂಬ ಅಮಾಯಕ ಬಲಿಯಾಗಿದ್ದನು. ಕೃತ್ಯದಲ್ಲಿ ಉತ್ತರ ಪ್ರದೇಶ, ಮೈಸೂರು, ಬೆಂಗಳೂರಿಗರ ಕೃತ್ಯ. ಈವರಗೆ ಆರು ಮಂದಿ ಅರೆಸ್ಟ್ ಆಗಿದ್ದರು. ಒಬ್ಬನ ಸುಳಿವು ಸಿಕ್ಕಿರಲಿಲ್ಲ.
ಸದ್ಯ ಈಗ ನಿನ್ನೆ ಹುಣಸೂರಿನ ಸ್ಕೈ ಗೋಲ್ಡ್& ಡೈಮೆಂಡ್ ಶಾಪ್ ನಲ್ಲಿ ದರೋಡೆಯಾಗಿದ್ದು, ನಾಲ್ಕುವರೆ ಕೋಟಿ ಮೌಲ್ಯದ ಚಿನ್ನ, ವಜ್ರವನ್ನು ಖದೀಮರು ದೋಚಿ ಪರಾರಿಯಾಗಿದ್ದಾರೆ.
ಮೈಸೂರಿನಲ್ಲಿ ಹೆಚ್ಚಿದ ದರೋಡೆಕೋರರು, ಮುಸುಕುಧಾರಿಗಳು: ಮುಖಕ್ಕೆ ಮಂಕಿಕ್ಯಾಪ್ ಹಾಕಿ ಓಡಾಟ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದರೋಡೆಕೋರರು, ಮುಸುಕುಧಾರಿಗಳ ಕಾಟ ಹೆಚ್ಚಾಗಿದ್ದು ನಿನ್ನೆ ಹುಣಸೂರಿನಲ್ಲಿ ಕೋಟಿ ಕೋಟಿ ಚಿನ್ನಾಭರಣ ಕದ್ದ ದಿನವೇ ಮುಸುಕುಧಾರಿಗಳು ಎಂಟ್ರಿಯಾಗಿದ್ದಾರೆ.
ಮುಸುಕುಧಾರಿಗಳು ಕೈಯಲ್ಲಿ ಲಾಂಗ್ ಸ್ಕ್ರ್ಯೂ ಡ್ರೈವರ್, ಸುತ್ತಿಗೆ ಸೇರಿ ಮಾರಾಕಾಸ್ತ್ರ ಹಿಡಿದು ಓಡಾಡಿದ್ದು ಮೈಸೂರು ನಗರದಲ್ಲಿ ಆತಂಕ ಸೃಷ್ಟಿಸಿದ್ದಾರೆ. ಮುಖಕ್ಕೆ ಮಂಕಿಕ್ಯಾಪ್, ಕೈಯಲ್ಲಿ ಗ್ಲೌಸ್ ಧರಿಸಿ ಓಡಾಟ ನಡೆಸಿದ್ದು ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮೈಸೂರಿನ ರೂಪನಗರ, ಭೋಗಾದಿಯಲ್ಲಿ ಸಂಚಾರ ಖದೀಮರು ಮಾಡಿದ್ದಾರೆ.
ಕಾವೇರಿ ಬಡಾವಣೆಯಲ್ಲಿ ಮೊನ್ನೆ ಬೈಕ್ ಕಳ್ಳತನವಾಗಿದ್ದು, ನಿನ್ನೆ ಹುಣಸೂರಿನಲ್ಲಿ ಬೈಕ್ ಮೂಲಕ ದರೋಡೆ ಮಾಡಿದ್ದಾರೆ. ಮೈಸೂರಿನ ಬೋಗಾದಿ, ರೂಪಾನಗರ, ನ್ಯಾಯಾಂಗ ಬಡಾವಣೆಗಳಲ್ಲಿ ಮುಸುಕುದಾರಿಗಳು ಕಳ್ಳತನ ಮಾಡಿದ್ದಾರೆ. ಮೈಸೂರಿನಲ್ಲಿ ಮುಸುಕುಧಾರಿಗಳು ಫ್ಯಾಷನ್ ಪ್ರೋ ಬೈಕ್ ಕದ್ದು ಹೋಗಿರುವ ಮೈಸೂರಿನ ಮುಸುಕುಧಾರಿಗಳ ಕೃತ್ಯ ಅನುಮಾನ ಹುಟ್ಟಿಸಿದ್ದು, ಹುಣಸೂರು ದರೋಡೆಗೆ ಮೈಸೂರಿನ ಮಂಕಿ ಕ್ಯಾಂಪ್ ಗೂ ಲಿಂಕ್ ಇದೆಯಾ ಎಂಬ ಪ್ರಶ್ನೆ ಎದ್ದಿದೆ.
Key words: biggest, robbery, cases, Mysore







